ಬೆಳಗಾವಿ : ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಪಟ್ಟಂತೆ ಅನ್ವರ್ ಮಣಿಪಾಡಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ 150 ಕೋಟಿ ಆಮೀಷ ಒಡ್ಡಿದ್ದರು ಎಂಬ ಆರೋಪದ ವಿಚಾರವಾಗಿ ಇಂದು ವಿಧಾನಸಭೆಯಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ತೀವ್ರ ಕೋಲಾಹಲ ಗಲಾಟೆ ನಡೆಯಿತು.
ಈ ವಿಷಯವನ್ನು ಮೊದಲು ಬಿವೈ ವಿಜಯೇಂದ್ರ ಪ್ರಸ್ತಾಪಿಸಿದ್ದು, ವಿರುದ್ಧ 150 ಕೋಟಿ ಆಮೀಷ ಆರೋಪದ ಕುರಿತು, ಸಿಎಂ ಸಿದ್ದರಾಮಯ್ಯ ನನ್ನ ಮೇಲೆ ಈ ಕುರಿತು ಆರೋಪ ಮಾಡಿದ್ದಾರೆ. 150 ಕೋಟಿ ಆಮಿಷ ಎಂದು ಸಿಎಂ ಸಿದ್ದರಾಮಯ್ಯ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ತನಿಖೆಯನ್ನು CBI ಗೆ ಕೊಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಗೆ ಕೇಂದ್ರ ತನಿಖಾ ಸಂಸ್ಥೆಯ ಮೇಲೆ ವಿಶ್ವಾಸ ಬಂದಿದ್ದಕ್ಕೆ ಸಂತೋಷವಾಗಿದೆ ಎಂದರು.
ಸದನದಲ್ಲಿ ಅನ್ವರ್ ಮಣಿಪಾಡಿ ವರದಿ ಬಗ್ಗೆಯೂ ಚರ್ಚೆಯಾಗಲಿ ಸಿಎಂ ಸಿದ್ದರಾಮಯ್ಯ ಹಗರಣಗಳ ಸರಮಾಲೆಯಲ್ಲಿ ಸಿಲುಕಿಕೊಂಡಿದ್ದಾರೆ.ಸಿಬಿಐ ತನಿಖೆಗೆ ಕೊಡಲು ಸಿಎಂಗೆ ಪರಮಾಧಿಕಾರ ಇದೆ. ಈ ವೇಳೆ ವಿಜಯೇಂದ್ರ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕೃಷ್ಣ ಭೈರೇಗೌಡ ಮಧ್ಯಪ್ರವೇಶಿಸಿದರು. ಈ ಸಂದರ್ಭ ಕೆಲ ಕಾಲ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.