ಬೆಂಗಳೂರು : ಬೆಂಗಳೂರಿನ ಕೆಜಿಎಫ್ ಬಾಬು ಮನೆಯ ಮೇಲೆ ಆರ್‌ಟಿಓ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐಷಾರಾಮಿ ಕಾರುಗಳ ಟ್ಯಾಕ್ಸ್ ಕಟ್ಟಿಲ್ಲ ಎಂದು ಅಧಿಕಾರ ಆರ್‌ಟಿಓ ಅಧಿಕಾರಿಗಳು ಎಂದು ಬೆಳಿಗ್ಗೆ ಕೆಜಿಎಫ್ ಬಾಬು ನಿವಾಸದ ಮೇಲೆ ದಾಳಿ ಮಾಡಿದ್ದಾರೆ.
ಹೌದು ಕೆಜಿಎಫ್ ಬಾಬುಗೆ ಆರ್‌ಟಿಓ ಅಧಿಕಾರಿಗಳು ಶಾಕ್ ನೀಡಿದ್ದು, ಐಷಾರಾಮಿ ಕಾರುಗಳ ಟ್ಯಾಕ್ಸ್ ಬಾಕಿ ಹಿನ್ನೆಲೆ ದಾಳಿ ನಡೆಸಿದ್ದಾರೆ. ಜಯಮಹಲ್ ಬಳಿ ಇರುವ ಕೆ ಜಿ ಎಫ್ ಬಾಬು ನಿವಾಸದ ಮೇಲೆ ಆರ್‌ಟಿಓ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ವಸಂತನಗರದಲ್ಲಿರುವ ರುಕ್ಸನ ಪ್ಯಾಲೇಸ್ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಅಧಿಕಾರಿಗಳು ಎಲ್ಲಾ ಕಾರುಗಳ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಕಾರುಗಳನ್ನು ಸೀಜ್ ಮಾಡಬೇಡಿ. ಟ್ಯಾಕ್ಸ್ ಕಟ್ಟುತ್ತೇನೆ ಕಾಲಾವಕಾಶ ಕೊಡಿ ಅಂತ ಕೆಜಿಎಫ್ ಬಾಬು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು, ನನ್ನ ಎರಡು ಕಾರುಗಳಿಗೆ ಮಹಾರಾಷ್ಟ್ರದಲ್ಲಿ ನೋಂದಣಿ ಆಗಿದೆ ಎರಡು ಗಾಡಿಗಳಿಗೂ ನಾನು ತೆರಿಗೆ ಕಟ್ಟಲು ಸಿದ್ಧನಾಗಿದ್ದೇನೆ ಎರಡು ಕಾರುಗಳಿಗೆ ಮಹಾರಾಷ್ಟ್ರದಲ್ಲಿ ಲೈಫ್ ಟೈಮ್ ಟ್ಯಾಕ್ಸ್ ಕಟ್ಟಿದ್ದೇನೆ ಈಗ ಆರ್ ಟಿ ಓ ಅಧಿಕಾರಿಗಳು ಕರ್ನಾಟಕ ತೆರಿಗೆ ಕಟ್ಟಿ ಅಂತ ಹೇಳುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಟ್ಯಾಕ್ಸ್ ಕಟ್ಟದೆ ಇರುವುದಿಲ್ಲ ಆರ್ ಟಿ ಓ ಅಧಿಕಾರಿಗಳು ಈಗ ಅವಕಾಶಕೊಟ್ಟರೆ ಈಗಲೇ ತೆರಿಗೆ ಕಟ್ಟುತ್ತೇನೆ. ಎಂದು ಕೆಜಿಫ್ ಬಾಬು ಹೇಳಿಕೆ ನೀಡಿದರು.