ಬೆಂಗಳೂರು : ಬೆಂಗಳೂರಿನಲ್ಲಿ ಐದೂವರೆ ಕೋಟಿ ಮೌಲ್ಯ ಬೆಂಟ್ಲಿ ಕಾರನ್ನು ಸೀಜ್ ಮಾಡಲಾಗಿದೆ. ನೋಂದಣಿಯ ವೇಳೆ ಕಾರು ಮಾಲೀಕ ಕಡಿಮೆ ಮೌಲ್ಯ ತೋರಿಸಿದ್ದ 5 ಕೋಟಿ 50 ಲಕ್ಷ ಮೌಲ್ಯ ಹೊಂದಿರುವ ಬೆಂಕಿ ಕಾರಿನ ಮೌಲ್ಯದ ಬೆಲೆ ಕಡಿಮೆ ಮೌಲ್ಯದ ಬೆಲೆ ಕಾರು ಎಂದು ತೋರಿಸಿ ನೋಂದಣಿ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಕೇವಲ 2,43,50,000 ಎಂದು ಮಾಲೀಕ ಬೆಲೆ ತೋರಿಸಿ ನೋಂದಣಿ ಮಾಡಿಸಿಕೊಂಡಿದ್ದ ಸುಮಾರು 70 ಲಕ್ಷದವರೆಗೆ ತೆರಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಕೋರಮಂಗಲದಲ್ಲಿ ಆರ್‌ಟಿಓ ಅಧಿಕಾರಿಗಳು ಇದೀಗ ಬೆಂಟ್ಲಿ ಕಾರನ್ನು ಸೀಜ್ ಮಾಡಿದ್ದಾರೆ. ತಪ್ಪು ಮೌಲ್ಯದ ಜೊತೆಗೆ ನಕಲಿ ದಾಖಲೆ ನೀಡಿ ನೋಂದಣಿ ಮಾಡಿರುವ ಆರೋಪ ಕೇಳಿ ಬಂದಿದೆ ಎರಡು ವರ್ಷದ ಹಿಂದೆ ಬೆಂಕಿ ಕಾರು ನೊಂದಣಿಯಾಗಿತ್ತು.








