ಕೊಡಗು : ರಾಜ್ಯದಲ್ಲಿ ಭೀಕರ ಮಳೆಯಾಗುತ್ತಿದ್ದು ಮಳೆಯ ರೌದ್ರ ನರ್ತನಕ್ಕೆ ರಾಜ್ಯ ಅಕ್ಷರಶಹಃ ನಲುಗಿದೆ. ಈ ಮಧ್ಯ ನದಿಗಳ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದು ನೀಡಿದ್ದು, ಮನೆ ಕಳೆದುಕೊಂಡವರಿಗೆ 2.5 ಲಕ್ಷ ಪರಿಹಾರದ ಜೊತೆಗೆ ಹೊಸ ಮನೆ ಕಟ್ಟಿಸಿ ಕೊಡುತ್ತೇವೆ ಎಂದು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ ನೀಡಿದರು.
ಕೊಡಗು ಜಿಲ್ಲೆಯ ಕುಶಲನಗರದಲ್ಲಿ ಇಂದು ಅವರು ಸುಧೀಕಾರದೊಂದಿಗೆ ಮಾತನಾಡಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 2.5 ಲಕ್ಷ ಜೊತೆಗೆ ಹೊಸ ಮನೆ ಕಟ್ಟಿಸಿ ಕೊಡುವ ಕುರಿತು ಈ ಸಂಬಂಧ ಶೀಘ್ರವೇ ನಾವು ಆದೇಶವನ್ನು ಹೊರಡಿಸುತ್ತೇವೆ ಎಂದು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಸಚಿವ ಕೃಷ್ಣಭರೇಗೌಡ ಹೇಳಿಕೆ ನೀಡಿದರು.
ಇನ್ನೂ ವಯನಾಡು ದುರಂತಕ್ಕೆ ಸಚಿವ ಕೃಷ್ಣೇಗೌಡ ಪ್ರತಿಕ್ರಿಯೆ ನೀಡಿದ್ದು, ಪರಿಸರದ ಮೇಲೆ ಆಗುತ್ತಿರುವ ಹಾನಿ ನಾವು ಗಮನಿಸುತ್ತಿಲ್ಲ. ಸಿಕ್ಕ ಸಿಕ್ಕ ಕಡೆ ರಸ್ತೆ ಮಾಡುತ್ತಿದ್ದೇವೆ ಮರ ಕಡಿಯುತ್ತೇವೆ. ನಮ್ಮ ಕಾಲಿಗೆ ನಾವೇ ಕೊಡಲಿ ಹಾಕುತ್ತಿದ್ದೇವೆ. ಇವೆಲ್ಲದರ ಸಂಘಟಿತ ಪ್ರತಿಫಲವೇ ವಯನಾಡಲ್ಲಿ ಆಗಿದೆ. ನಮ್ಮ ಆಸೆ ದುರಾಸೆಗಳಿಗೆ ನಾವು ಇತಿಮಿತಿ ಆಗಬೇಕಿದೆ ಎಂದರು.
ಎಲ್ಲಿ ದುರ್ಘಟನೆ ಆಗುತೆಂದು ಡಿಸಿಗಳು ಅಂದಾಜಿಸಬೇಕು ಅಂತಹ ಸ್ಥಳಗಳಲ್ಲಿ ಜನರನ್ನ ಬಲವಂತವಾಗಿ ತೆರವುಗೊಳಿಸಬೇಕು.ಜನ ಒಪ್ಪೋದಿಲ್ಲ ಅಂತ ಡಿಸಿಗಳು ನಿರ್ಲಕ್ಷ ಮಾಡಬಾರದು ನಮ್ಮ ಕೆಲವು ಡಿಸಿಗಳು ರಾಜಕಾರಣಿಗಳಿಗಿಂತ ಉದಾರ. ಪ್ರವಾಹ ದಾಟುವುದು, ಸೆಲ್ಫಿ ತೆಗೆಯುವರಿಗೆ ಲಾಠಿ ರುಚಿ ತೋರಿಸಿ ಎಂದು ಎಲ್ಲಾ ಜಿಲ್ಲಾ ಆಡಳಿತಕ್ಕೆ ಕೃಷ್ಣ ಭೈರೇಗೌಡ ಖಡಕ್ ಸೂಚನೆ ನೀಡಿದರು.