ಬೆಂಗಳೂರು : ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ರೌಡಿಶೀಟರ್ ಮನೋಜ್ ಅಲಿಯಾಸ್ ಕೆಂಚ ಎನ್ನುವ ರೌಡಿಯೊಬ್ಬ ಜೈಲಿನಿಂದ ಯುವತಿಯ ನಗ್ನ ಫೋಟೋ ಕಳುಹಿಸಿ ಹಣ ನೀಡುವಂತೆ ಯುವತಿಯ ತಾಯಿಗೆ ಬೆದರಿಕೆ ಒಡ್ಡಿರುವಂತಹ ಘಟನೆ ನಡೆದಿದೆ.
ಯುವತಿಯ ಬೆತ್ತಲೆ ಫೋಟೋ ಇಟ್ಟುಕೊಂಡು ರೌಡಿ ಮನೋಜ್ ಎಂಬತನಿಂದ ಬೆದರಿಕೆ ಹಾಕಲಾಗುತ್ತಿದೆ. ಈ ಹಿಂದೆಯೂ ಇದೆ ರೀತಿ ಬೆದರಿಕೆ ಹಾಕಿ ಮನೋಜ್ ಮತ್ತು ಆತನ ಗ್ಯಾಂಗ್ ಹಣ ಕಿತ್ತುಕೊಂಡಿದ್ದರು ಎನ್ನಲಾಗುತ್ತಿದೆ.ಯುವತಿಯ ತಾಯಿಗೆ ಫೋಟೋ ಕಳಿಸಿ ಮನೋಜ್ ಮತ್ತು ತಂಡ ಹಣ ಪಡೆದಿದ್ದರು ಎಂದು ಹೇಳಲಾಗುತ್ತಿದೆ.
ನಿನ್ನ ಮಗಳ ಬೆತ್ತಲೆ ಫೋಟೋ ನಿನ್ನ ಅಳಿಯನಿಗೆ ಕಳುಹಿಸುತ್ತೇನೆ ಅಂತ ಬೆದರಿಕೆ ಹಾಕಿದ್ದರು.ಮಗಳ ಬೆತ್ತಲೆ ಫೋಟೋ ತೋರಿಸಿ ಮನೋಜ್ 40,000 ಗಳನ್ನು ಪಡೆದಿದ್ದ ಫೆಬ್ರವರಿ 9ರಂದು ಮನು ಅಸೋಸಿಯೇಟ್ ಕಾರ್ತಿಕ್ ನಿಂದ ಕರೆ ಮಾಡಿ ಬೆದರಿಕೆ ಒಡಲಾಗಿತ್ತು. 5 ಲಕ್ಷ ಕೊಡದಿದ್ರೆ ನಿನ್ನ ಅಳಿಯನಿಗೆ ಮಗಳ ಬೆತ್ತಲೆ ಫೋಟೋ ಕಳಿಸುತ್ತೇನೆ ಅಂತ ಅವಾಜ್ ಹಾಕಿದ್ದ ಎನ್ನಲಾಗಿದೆ.
ಕಾನ್ಸ್ಟೇಬಲ್ ಮೇಲೆ ಶಾಸಕಿ ಪುತ್ರ ಹಲ್ಲೆ ಪ್ರಕರಣ : ಸಹಿ ಅಭಿಯಾನಕ್ಕೆ ಮುಂದಾದ ಪೇದೆ ಹನುಮಂತರಾಯ
ಫೆಬ್ರವರಿ 12ರಂದು ರೌಡಿ ಮನೋಜ್ ಜೈಲಿನಿಂದಲೇ ಕರೆ ಮಾಡಿ ತಾಯಿಗೆ ಧಮ್ಕಿ ಹಾಕಿದ್ದ ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ. ವಾಟ್ಸಾಪ್ ಮೆಸೆಂಜರ್ ಕಾಲ್ ಮಾಡಿ ಮನೋಜ್ ಮತ್ತು ಕಾರ್ತಿಕ್ ನಿಂದ ಬೆದರಿಕೆ ಒಡಲಾಗಿದೆ ಹಣ ನೀಡದಿದ್ದರೆ ಯುವತಿಯ ಫೋಟೋ ರಿವಿಲ್ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದಾನೆ.
ಫೋಟೋ ಮಾರ್ಫ್ ಮಾಡಿ ಬೆದರಿಸುತ್ತಿದ್ದಾರೆ ಅಂತ ಇದೀಗ ಪೊಲೀಸರಿಗೆ ತಾಯಿ ದೂರು ನೀಡಿದ್ದಾರೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ಸಂತ್ರಸ್ತೇ ದೂರು ನೀಡಿದ್ದಾರೆ. ಐಟಿ 67 ಐಪಿಸಿ ಸೆಕ್ಷನ್ 34 ಮತ್ತು 384ರ ಅಡಿ ಪ್ರಕರಣ ದಾಖಲಾಗಿದೆ. ಬಾಡಿ ವಾರೆಂಟ ಮೇಲೆ ಮನೋಜ್ ನನ್ನು ಇದೀಗ ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.
BIG NEWS : ಫೆ.17ರಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರಿಂದ ʻಬೆಂಗಳೂರು ಚಲೋʼ
ಬೆಂಗಳೂರಿನಲ್ಲಿ ‘ಮದ್ಯ ನಿಷೇಧ’: ಅವಧಿಯನ್ನು ಕಡಿಮೆ ಮಾಡಲು ಹೈಕೋರ್ಟ್ ಆದೇಶ