ವಿಜಯನಗರ : ಹಳೇ ವೈಷಮ್ಯದ ಕಾರಣದಿಂದ ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಎದೆಗೆ ಚೂರಿ ಹಾಕಿ ರೌಡಿಶೀಟರನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯನಗರದ ಹಗರಿಬೊಮ್ಮನಹಳ್ಳಿಯ ಜೆಸ್ಕಾಂ ಕಚೇರಿಯ ಬಳಿ ನಡೆದಿದೆ.
ಬಂಗಾರಿ ಮಂಜುನಾಥ ( 28) ಕೊಲೆಯಾದ ರೌಡಿಶೀಟರ್. ಹಣಕಾಸಿನ ವಿಚಾರಕ್ಕೆ ನಡೆದಿರುವ ಗಲಾಟೆ ಮತ್ತು ಹಳೆ ವೈಷಮ್ಯದಿಂದ ಎದೆಗೆ ಚೂರಿಗೆ ಹಾಕಿರುವ ದುಷ್ಕರ್ಮಿಗಳು. ಕುಟುಂಬಸ್ಥರೇ ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ. ಕೊಲೆ ಘಟನೆ ಬಳಿಕ ವಿಜಯನಗರ ಎಸ್‌ಪಿ ಶ್ರೀಹರಿಬಾಬು ಬಿಎಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವಿಕಾಸ್, ವೆಂಕಟಸ್ವಾಮಿ ಸೇರಿದಂತೆ ಪೊಲೀಸರು ಸ್ಥಳದಲ್ಲಿ ಮೊಕ್ಕಮ ಹೂಡಿ ವಿಚಾಋಣೇ ಮುಂದುವರಿಸಿದ್ದಾರೆ