ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚಿಗೆ ರೌಡಿಶೀಟರ್ ಬಿಕ್ಲು ಶಿವನನ್ನು ಮಾರಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು ಇದೀಗ ಈ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಜಗ್ಗನ ವಿರುದ್ಧ ಕ್ಲೋಸ್ ಆಗಿದ್ದ ರೌಡಿಶೀಟರ್ ಪೊಲೀಸರು ಮತ್ತೆ ರೀ ಓಪನ್ ಮಾಡಿದ್ದಾರೆ.
ಹೌದು ಬೆಂಗಳೂರಿನ ಪೂರ್ವ ವಿಭಾಗ ಪೊಲೀಸರು ಆರೋಪಿ ಜಗ್ಗನ ವಿರುದ್ಧ ರೌಡಿಶೀಟರ್ ಓಪನ್ ಮಾಡಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಜಗ್ಗನ ವಿರುದ್ಧ ರೌಡಿ ಪಟ್ಟಿ ಭಾರತಿ ನಗರ ಠಾಣೆಯಲ್ಲಿ ಬಿ ರೌಡಿ ಪಟ್ಟಿ ತೆರೆಯಲಿದ್ದಾರೆ ಈ ಒಂದು ಕೊಲೆ ಪ್ರಕರಣದಲ್ಲಿ ಬಂಧನವಾದ ಎಲ್ಲಾ ಆರೋಪಿಗಳ ವಿರುದ್ಧ ಕೂಡ ರೌಡಿಶೀಟರ್ ಓಪನ್ ಆಗಲಿದೆ ಆರೋಪಿಗಳ ವಿರುದ್ಧ ಭಾರತೀಯ ನಗರ ಪೊಲೀಸ್ರಿಂದ ರೌಡಿ ಶೀಟ್ ಓಪನ್ ಆಗಲಿದೆ ಮುಂದಿನ ದಿನದಲ್ಲಿ ಪೊಲೀಸರು ಓಪನ್ ಮಾಡಿದ್ದಾರೆ.
ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಅಧಿಕಾರಿಗಳು ಆರೋಪಿ ಜಗದೀಶ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದಾರೆ. ಆರೋಪಿ ಜಗ್ಗ ಎಲ್ಲಿ ಇದ್ದಾನೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.ಈ ಹಿಂದೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಈಗ ಜಗ್ಗ ವಿದೇಶದಲ್ಲಿ ಎಲ್ಲೇ ಇದ್ದರೂ ಮಾಹಿತಿ ಸಿಗುವ ನಿರೀಕ್ಷೆ ಇದೆ ಬ್ಲೂ ಕಾರ್ನರ್ ನೋಟಿಸ್ ಅನ್ವಯ ಸಿಐಡಿ ಗೆ ಮಾಹಿತಿ ಸಿಗುವ ನಿರೀಕ್ಷೆ ಇದೆ.