ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೋಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಅಧಿಕಾರಿಗಳು ಜಡ್ಜ್ ಮುಂದೆ ಇಂದು ಭೈರತಿ ಬಸವರಾಜ್ ಅವರನ್ನು ಹಾಜರುಪಡಿಸಿದರು. ಕೋರಮಂಗಲದಲ್ಲಿರುವ 42ನೇ ACJM ಕೋರ್ಟ್ ನಿವಾಸದಲ್ಲಿ ಹಾಜರುಪಡಿಸಿದರು. ಸಿಐಡಿ ಪೊಲೀಸರ ಪರವಾಗಿ ಎಸ್‍ಪಿಪಿ ಅಶೋಕ್ ನಾಯಕ್ ಇದೆ ವೇಳೆ ಹಾಜರಾದರು.
ವಿಚಾರಣೆಯ ವೇಳೆ ನ್ಯಾಯಾಧೀಶರು ಫೆಬ್ರವರಿ 21 ರವರೆಗೆ ಅಂದರೆ 7 ದಿನಗಳ ಕಾಲ ಬಿಜೆಪಿ ಶಾಸಕ ಭೈರತಿ ಬಸವರಾಜ ನೀಡಿ ಆದೇಶ ನೀಡಿದರು. ಈ ಒಂದು ಕೊಲೆ ಪ್ರಕರಣದಲ್ಲಿ ಅವರು ಕಳೆದ ಕೆಲವು ದಿನಗಳ ಹಿಂದೆ ತಲೆಮರಿಸಿಕೊಂಡಿದ್ದರು. ಅಜ್ಞಾತ ಸ್ಥಳದಿಂದಲೇ ತಮ್ಮ ವಕೀಲರ ಮೂಲಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಹೈ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎರಡು ಕಡೆ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿತ್ತು.








