ಹಾಸನ : ರಾಕಿಂಗ್ ಸ್ಟಾರ್ ನಟ ಯಶ್ ಅವರ ವಿರುದ್ಧ ಕೂಡ ಭೂ ಒತ್ತುವರಿ ಆರೋಪ ಕೇಳಿಬಂದಿದ್ದು, ಅಕ್ರಮ ಕಂಪೌಂಡ್ ತೆರವು ಶಾಕ್ ಎದುರಾಗಿದೆ. ಹಾಸನದಲ್ಲಿ ಅಕ್ರಮ ಕಾಂಪೌಂಡ್ ಅನ್ನು ತೆರವು ಮಾಡಲಾಗಿದೆ ಜೆಸಿಬಿ ಮೂಲಕ ಕಾಂಪೌಂಡ್ ಧ್ವಂಸ ಮಾಡಲಾಗಿದೆ.
ಬೆಳ್ಳಂ ಬೆಳಿಗ್ಗೆ ಮಾಲೀಕರು ನಟ ಯಶ್ ಅವರ ತಾಯಿ ಅವರಿಗೆ ಸೇರಿದಂತಹ ಮನೆಯ ಕಂಪೌಂಡ್ ಅನ್ನು ತೆರವುಗೊಳಿಸಿದ್ದಾರೆ ಲಕ್ಷ್ಮಮ್ಮ ಜಾಗದಲ್ಲಿ ಅಕ್ರಮ ಕಾಂಪೌಂಡ್ ನಿರ್ಮಾಣ ಮಾಡಲಾಗಿತ್ತು ಅಕ್ರಮ ಕಾಂಪೌಂಡ್ ನಿರ್ಮಾಣದ ಆರೋಪ ಕೇಳಿ ಬಂದಿತ್ತು . ಇದೀಗ ಜೆಸಿಬಿ ಮೂಲಕ ಇದೀಗ ತೆರವುಗೊಳಿಸಲಾಗಿದೆ.
ಹಾಸನದ ವಿದ್ಯಾ ನಗರದಲ್ಲಿರುವ ನಟ ಯಶ್ ತಾಯಿ ಪುಷ್ಪ ಅವರ ಮನೆ ಸುಮಾರು 1,500 ಅಡಿ ಜಾಗವನ್ನು ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. ಕೋರ್ಟ್ ಅನುಮತಿ ಮೇರೆಗೆ ಕಾಂಪೌಂಡ್ ತೆರವುಗೊಳಿಸಲಾಗಿದೆ. ಅನುಮತಿಯ ಮೇರೆಗೆ ಅಕ್ರಮ ಕಾಂಪೌಂಡ್ ಅನ್ನು ಇದೀಗ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.








