ಬೆಂಗಳೂರು : ಹನಿಟ್ರ್ಯಾಪ್ ಹೆಸರಿನಲ್ಲಿ ದರೋಡೆ ಮಾಡುತ್ತಿದ್ದ ಆರು ಜನ ಆರೋಪಿಗಳನ್ನ ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೋಲಿಸರಿಂದ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಶರಣಬಸಪ್ಪ, ರಾಜು ಮಾನೆ, ಶ್ಯಾಮ್ ಸುಂದರ್, ಅಭಿಷೇಕ್ ಬೀರಬಲ್ ಹಾಗೂ ಸಂಗೀತಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳು ಬೇಕಿಂಗ್ ಸೋಡಾ ತೋರಿಸಿ ಡ್ರಗ್ಸ್ ಪಾರ್ಟಿ ಮಾಡ್ತಿದ್ದೀರಾ ಅಂತ ಧಮ್ಕಿ ಹಾಕುತ್ತಿದ್ದರು.ಆಪ್ ಗಳ ಮೂಲಕ ಜನರನ್ನು ಸಂಪರ್ಕ ಮಾಡುತ್ತಿದ್ದರು. ರೂಮಿಗೆ ಕರೆದೋಯ್ದು ಇದು ಡ್ರಗ್ ಪಾರ್ಟಿ ಅಂತ ಈ ಗ್ಯಾಂಗ್ ಹೆದರಿಸುತ್ತಿತ್ತು. ರಾಕೇಶ್ ರೆಡ್ಡಿ ಎಂಬತನ ಬಳಿ ಈ ಒಂದು ಗ್ಯಾಂಗ್ 2 ಲಕ್ಷ ಸುಲಿಗೆ ಮಾಡಿದ್ದು ರಾಕೇಶ್ ರೆಡ್ಡಿ ಯನ್ನು ಆರೋಪಿ ಸಂಗೀತ ಪರಿಚಯ ಮಾಡಿಕೊಂಡಿದ್ದಾಳೆ. ಡೇಟಿಂಗ್ ಆಪ್ ಮೂಲಕ ಸಂಗೀತಾಗೆ ರಾಕೇಶ್ ಪರಿಚಯ ಆಗಿದ್ದಾನೆ.
ನಂತರ ರೂಂಗೆ ಕರೆದೋಯ್ದು ರಾಕೇಶ್ ಕೆ ಸಂಗೀತ ಮದ್ಯಪಾನ ಮಾಡಿಸಿದ್ದಾಳೆ. ಇದೆ ವೇಳೆ ಉಳಿದ ಆರೋಪಿಗಳು ರೂಂಗೆ ಎಂಟ್ರಿ ಕೊಟ್ಟಿದ್ದಾರೆ. ನೀವು ಡ್ರಗ್ ಪಾರ್ಟಿ ಮಾಡುತ್ತಿದ್ದೀರಾ ಅಂತ ಧಮ್ಕಿ ಹಾಕಿದ್ದಾರೆ ನಿಮ್ಮನ್ನು ಪೊಲೀಸರಿಗೆ ಹಿಡಿದು ಕೊಡುತ್ತೇವೆ ಅಂತ ಬೆದರಿಕೆ ಹಾಕಿದ್ದಾರೆ.ಸಂಗೀತ ಬ್ಯಾಂಕ್ ನಲ್ಲಿ ಬೇಕಿಂಗ್ ಸೋಡಾ ಇಟ್ಟುಕೊಂಡಿದ್ದಳು. ಡ್ರಗ್ಸ್ ಅಂತ ಹೇಳಿ ಉಳಿದ ಆರೋಪಿಗಳು ರಾಕೇಶ್ ಗೆ ಬೆದರಿಸಿದ್ದಾರೆ. ಬೆದರಿಸಿ 2 ಲಕ್ಷ ರೂಪಾಯಿ ದರೋಡೆ ಮಾಡಿದ್ದರು ಈ ಕುರಿತು ರಾಕೇಶ್ ಯಲಹಂಕ ನ್ಯೂಟೌನ್ ಠಾಣೆಗೆ ದೂರು ನೀಡಿದ್ದ ತನಿಖೆ ನಡೆಸಿ ಪೊಲೀಸರು ಇದೀಗ 6 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ