ಬೆಂಗಳೂರು : ಸಾರಿಗೆ ಬಸ್ಗಳಲ್ಲಿ ಟಿಕೆಟ್ ಪ್ರಯಾಣದ ದರ ಶೇಕಡ 15 ಪರ್ಸೆಂಟ್ ಹೆಚ್ಚಳ ಮಾಡಿ ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರದಿಂದ ಅನುಮೋದನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ ಇಂದಲೇ ಸಾರಿಗೆ ಬಸ್ಗಳ ಟಿಕೆಟ್ ದರ ಶೇಕಡ 15ರಷ್ಟು ಏರಿಕೆ ಆಗುವ ಸಾಧ್ಯತೆಯಿದ್ದು ಪರಿಷ್ಕೃತ ದರ ಜಾರಿ ಆಗುತ್ತದೆ.
ಹೌದು ಇಂದು ಮಧ್ಯರಾತ್ರಿಯಿಂದಲೇ ಟಿಕೆಟ್ ದರ ಏರಿಕೆಯಾಗಲಿದ್ದು, KSRTC, KKRTC, NWKRTC ಹಾಗೂ BMTC ಸೇರಿ ಎಲ್ಲ ನಾಲ್ಕು ಸಾರಿಗೆ ನಿಗಮಗಳು ಅಧಿಕೃತ ಆದೇಶದ ಪ್ರತಿಗಾಗಿ ಕಾಯುತ್ತಿವೆ. ಮಧ್ಯಾಹ್ನದ ಬಳಿಕ ಆದೇಶದ ಪ್ರತಿ ಸಿಗುವ ಸಾಧ್ಯತೆ ಇದ್ದು, ಬಳಿಕ ಇಟಿಎಂ ಅಪ್ಲೋಡ್ ಕೆಲಸ ಆರಂಭವಾಗುತ್ತದೆ.
ಆದೇಶ ಬಂದರೆ ಮಧ್ಯರಾತ್ರಿ ಇಂದಲೇ ಪರಿಷ್ಕೃತ ದರ ಜಾರಿ ಆಗುತ್ತದೆ. ಪ್ರತಿ ಡಿಪೋಗು ಟೆಕ್ನಿಕಲ್ ಇಂಜಿನಿಯರ್ ಕಳುಹಿಸಲು ಚಿಂತನೆ ನಡೆಸಲಾಗುತ್ತಿದ್ದು, ಇಟಿಎಂ ಹೊಸ ದರಗಳ ಚಿಂತನೆ ನಡೆಸಲಾಗುತ್ತಿದೆ. ಸದ್ಯಕ್ಕೆ ಚಿಲ್ಲರೆ ಸಮಸ್ಯೆ ಸೇರಿದಂತೆ ಕೆಲ ಗೊಂದಲಗಳಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ.