ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕದ ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೊಲೆ ಪ್ರಕರಣದ ತನಿಖೆ ಬಹುತೇಕ ಕೊನೆಯ ಹಂತ ತಲುಪಿದ್ದು, ತನಿಖೆಯ ವೇಳೆ ಕೆಲವು ಸ್ಪೋಟಕವಾದ ವಿಚಾರಗಳು ಬಯಲಾಗಿದೆ.
ಕೊಲೆಯಾದ ಓಂ ಪ್ರಕಾಶ್ ಅವರ ಪ್ರಕರಣವನ್ನು ರಾಜ್ಯ ಸರ್ಕಾರ ಸಿಸಿಬಿಗೆ ವಹಿಸಿತ್ತು. ಕೊಲೆಗೆ ಪ್ರಮುಖ ಕಾರಣಗಳನ್ನು ಇದೀಗ ಸಿಸಿಬಿ ಪತ್ತೆ ಹಚ್ಚಿದೆ. ಕುಟುಂಬದ ಬಗ್ಗೆ ತೋರಿದ ನಿರ್ಲಕ್ಷವೇ ಓಂಪ್ರಕಾಶ್ ಅವರ ಕೊಲೆಗೆ ಕಾರಣವಾಗಿದೆ. ಆಸ್ತಿಯ ವಿಚಾರದಲ್ಲಿ ಕುಟುಂಬದಲ್ಲಿ ಭೋಗಿಲೆದ್ದಿದ್ದ ಮನಸ್ಥಾಪದಿಂದ ಓಂ ಪ್ರಕಾಶ್ ಅತ್ತೆಯಾಗಿದೆ.
ಕೌಟುಂಬಿಕ ಕಾರಣಗಳಿಂದ ಪತಿಯನ್ನು ಕ್ರೂರವಾಗಿ ಪತ್ನಿ ಪಲ್ಲವಿ ಅತ್ತೆಗೈದಿದ್ದರೂ ಓಂ ಪ್ರಕಾಶ್ ಕೊಲೆಗೆ ಸಿಸಿಬಿ ತನಿಖೆಯ ವೇಳೆ ಕೆಲವು ಕಾರಣಗಳನ್ನು ಪತ್ತೆ ಹಚ್ಚಿದೆ. ತನ್ನ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಿಲ್ಲ ಎಂದು ಪತ್ನಿ ಪಲ್ಲವಿ ಆರೋಪಿಸಿದ್ದಾರೆ ಮಗಳಿಗೆ ಮದುವೆ ಮಾಡಿಲ್ಲ ಎಂದು ಪತಿಯ ಮೇಲೆ ಕೋಪಗೊಂಡಿದ್ದರು.
ತನ್ನ ಭಾಗದ ಕುಟುಂಬದ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದ ಓಂ ಪ್ರಕಾಶ್ ಸಮಸ್ಯೆಗಳಾದಾಗ ನೇರವಾಗಿ ಓಂ ಪ್ರಕಾಶ್ ತನ್ನ ಸೋದರಿ ಮನೆಗೆ ತೆರಳುತ್ತಿದ್ದರು. ಐಷಾರಾಮಿ ಮನೆಯಲ್ಲಿ ಇದ್ದರೂ ಕೂಡ ಮಗಳ ಕೈಗೆ ಖರ್ಚಿಗೆ ಹಣ ನೀಡುತ್ತಿರಲಿಲ್ಲ. ಸಂಪೂರ್ಣ ಹಣದ ವ್ಯವಹಾರ ಓಂ ಪ್ರಕಾಶ್ ಒಬ್ಬರೇ ನೋಡಿಕೊಳ್ಳುತ್ತಿದ್ದರು.
ಈ ಹಿಂದೆ ಜಗಳ ಮಾಡಿಕೊಂಡು ಪಲ್ಲವಿ ಮನೆ ಬಿಟ್ಟು ಹೋಗಿದ್ದರು. ಜಗಳದಿಂದ ತೀವ್ರವಾಗಿ ಓಂ ಪ್ರಕಾಶ್ ಪತ್ನಿ ಪಲ್ಲವಿ ಮನನೊಂದಿದ್ದರು. ಪತಿ ಓಂ ಪ್ರಕಾಶ್ ತನ್ನನ್ನು ಕೊಲೆ ಮಾಡಬಹುದು ಎಂದೆಲ್ಲ ಪತ್ನಿ ಪಲ್ಲವಿ ಯೋಚಿಸುತ್ತಿದ್ದಳು. ಕೊಲೆಯಾಗುವ ಬದಲು ಪಲ್ಲವಿ ತಾನೇ ಕೊಲ್ಲುವ ನಿರ್ಧಾರ ಮಾಡಿದ್ದಾರೆ. ಹಾಗಾಗಿ ಈ ಎಲ್ಲ ಕಾರಣಗಳಿಂದ ಪಲ್ಲವಿ ಓಂಪ್ರಕಾಶ್ ಅವರನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.