ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಟ ದರ್ಶನ್ ಅವರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಮಧ್ಯಾಹ್ನ 2.45ಕ್ಕೆ ಮುಂದೂಡಿದರು.
ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿ, ಪ್ರತ್ಯಕ್ಷ ಸಾಕ್ಷಿ ಬಿಟ್ಟರೆ ಬೇರೆ ಸಾಕ್ಷಿಯೇ ಇಲ್ಲ. ಕ್ರತ್ಯ ಸಾಬೀತುಪಡಿಸುವಂತಹ ಒಂದು ಅಂಶವೂ ಇಲ್ಲ. ರಿಮ್ಯಾಂಡ್ ಅರ್ಜಿ ಸಲ್ಲಿಸಿದರೆ ಕೋರ್ಟಿಗೆ ಕೇಸ್ ಡೈರಿ ಪ್ರತಿ ನೀಡಬೇಕು. ಕೇಸ್ ಡೈರಿಯಲ್ಲ ಡೈರಿಯ ಪ್ರತಿ ಸಲ್ಲಿಸಬೇಕು. ಏಕೆಂದರೆ ಕೆಸ್ ಡೈರಿ ಕೊಟ್ಟರೆ ಅದನ್ನು ತನಿಖಾಧಿಕಾರಿ ಪಡೆಯುತ್ತಾರೆ.
ಹೀಗಾಗಿಯೇ ಕೆಸ್ ಡೈರಿಯ ಪ್ರತಿಯನ್ನು ಕೋರ್ಟಿಗೆ ಸಲ್ಲಿಸಬೇಕು. ಇದಕ್ಕೆ ಎಸ್ ಪಿ ಪಿ ಪ್ರಸನ್ನಕುಮಾರ್ ನಾವು ಕೇಸ್ ಡೈರಿ ಪ್ರತಿ ಸಲ್ಲಿಸಿದ್ದೇವೆ. ಗೊತ್ತಿಲ್ಲದಿದ್ದರೆ ಹಿರಿಯ ವಕೀಲರು ಆ ಬಗ್ಗೆ ವಾದ ಮಂಡಿಸಬಾರದು ಎಂದರು. ಬಳಿಕ ಜಡ್ಜ್ ಜೈ ಶಂಕರ್ ಅವರು ವಿಚಾರಣೆಯನ್ನು 2.45ಕ್ಕೆ ಮುಂದೂಡಿದರು.