ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್, ಪವಿತ್ರಗೌಡ ಸೇರಿ ಎಲ್ಲಾ 17 ಆರೋಪಿಗಳ ವಿರುದ್ಧ ಇದೀಗ ಪೊಲೀಸರು 4500 ಪುಟಗಳಷ್ಟು ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದು ನಾಳೆಯೇ ದೋಷಾರೋಪಣೆ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೌದು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೆ ಸೆಪ್ಟೆಂಬರ್ 9 ಕ್ಕೆ 3 ತಿಂಗಳು ತುಂಬಲಿವೆ. ಈಗಾಗಲೇ 4500 ಪುಟಗಳ ಚಾರ್ಜ್‌ಶೀಟ್ ಮುಕ್ತಾಯಗೊಂಡಿದ್ದು, ನಾಳೆಯೇ ಸಲ್ಲಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶವಾಗಬಾರದೆಂದು ಕಾನೂನು ತಜ್ಞರ ಸಲಹೆಯನ್ನೂ ಪಡೆಯಲಾಗಿದೆ. ಎರಡ್ಮೂರು ಬಾರಿ ಪರಿಶೀಲನೆಯನ್ನೂ ನಡೆಸಲಾಗಿದೆ. 200 ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.
ಪ್ರಕರಣ ದಾಖಲಾದ ಬಳಿಕ 90 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವುದು ನಿಯಮ. ಹಾಗಾಗಿ ಸೆಪ್ಟೆಂಬರ್ 9ಕ್ಕೆ 3 ತಿಂಗಳು ಅಂದರೆ ಸಂಪೂರ್ಣವಾಗಿ 90 ದಿನಗಳು ಮುಗಿಯಲಿವೆ. ಹಾಗಾಗಿ 200 ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಈಗಾಗಲೇ ಕಾನೂನು ತಜ್ಞರಿಂದ ಪೊಲೀಸ್ ಇಲಾಖೆ ಸಲಹೆಯನ್ನೂ ಪಡೆದಿದೆ. ಎರಡ್ಮೂರು ಬಾರಿ ಪರಿಶೀಲನೆಯನ್ನೂ ಮಾಡಲಾಗಿದೆ. ಅಪರಾಧಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು ಎಂದು ಖಾಕಿ ಪಡೆ ಭಾರೀ ಎಚ್ಚರಿಕೆ ವಹಿಸಿದೆ.
ಇನ್ನೂ ನಟ ದರ್ಶನ್‌ಗೆ ಬೆನ್ನುಹುರಿ ಸಮಸ್ಯೆ ಇರುವ ಬಗ್ಗೆ ಮತ್ತು ಹಿಂದೊಮ್ಮೆ ಆಗಿದ್ದ ಕೈ ಮುರಿತದ ನೋವು ಇನ್ನೂ ಇರುವ ಬಗ್ಗೆ ಕುಟುಂಬಸ್ಥರು ಬಳ್ಳಾರಿ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ದಾಖಲೆ ಸಲ್ಲಿಸಿ, ಶೌಚಕ್ಕೆ ಸರ್ಜಿಕಲ್ ಚೇರ್ ಒದಗಿಸಿಕೊಡುವಂತೆ ಮನವಿ ಮಾಡಿದ್ದರು. ಇವುಗಳನ್ನು ಪರಿಶೀಲಿಸಿರುವ ಜೈಲಿನ ಅಧಿಕಾರಿಗಳು ಮತ್ತು ವೈದ್ಯರ ತಂಡ ಸರ್ಜಿಕಲ್ ಚೇರ್ ನೀಡಲು ನಿರ್ಧರಿಸಿದೆ.