ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪವಿತ್ರ ಗೌಡ ಸೇರಿ ಹಲವು ಆರೋಪಿಗಳು ಮನೆ ಊಟ ಬೇಕು ಎಂದು ಅರ್ಜಿ ಸಲ್ಲಿಸಿದರು.ಇಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ಈ ಒಂದು ಅರ್ಜಿಯ ವಿಚಾರಣೆ ನಡೆಸಿ ಪವಿತ್ರ ಗೌಡ, ನಾಗರಾಜ ಮತ್ತು ಲಕ್ಷ್ಮಣ್ಗೆ ವಾರಕ್ಕೊಮ್ಮೆ ಮನೆ ಊಟ ನೀಡಬೇಕು ಎಂದು ಆದೇಶ ಹೊರಡಿಸಿದೆ.
ಮನೆ ಊಟಕ್ಕಾಗಿ ಪವಿತ್ರ ಗೌಡ ಸೇರಿದಂತೆ ಹಲವು ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಇಂದು 57ನೇ ಸಿಸಿಎಚ್ ನ್ಯಾಯಾಲಯ ವಿಚಾರ ನಡೆಸಿ ಈ ಒಂದು ಆದೇಶ ನೀಡಿದ್ದು ದಿನನಿತ್ಯ ಮನೆ ಊಟಕ್ಕೆ ಜೈಲು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಆದೇಶವನ್ನು ಮಾರ್ಪಡಿಸಿದ್ದು ವಾರಕ್ಕೆ ಒಂದು ಬಾರಿ ಮನೆ ಊಟ ನೀಡಲು ಇದೀಗ ಮತ್ತೊಮ್ಮೆ ಆದೇಶ ಹೊರಡಿಸಿದೆ. ಈ ಮೂಲಕ ಪವಿತ್ರ ಗೌಡ ನಾಗರಾಜು ಮತ್ತು ಲಕ್ಷ್ಮಣ್ಗೆ ವಾರಕ್ಕೆ ಒಮ್ಮೆ ಮನೆ ಊಟ ಸಿಗುತ್ತದೆ.








