ಗದಗ : ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 13ನೇ ದಿನಕ್ಕೆ ಉತ್ಖನನ ಕಾರ್ಯ ಮುಂದುವರೆದಿದ್ದು, ಇದೀಗ ನಿಧಿ ಶೋಧ ನಡೆಸುವ ವೇಳೆ ನಿಜವಾಗಿಯೂ ಒಂದು ಹಾವು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಇದೀಗ ಆತಂಕ ಮನೆ ಮಾಡಿದೆ.
ಹೌದು ಲಕ್ಕುಂಡಿಯಲ್ಲಿ ಇಂದು 13ನೇ ದಿನದ ಉತ್ಖನನ ಕಾರ್ಯ ನಡೆಯುತ್ತಿದ್ದು ಉತ್ಖನನ ನಡೆಯುತ್ತಿರುವ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿತು. ನಿನ್ನೆ ಮೂರು ಹೆಡೆ ನಾಗರಿಕ ಶಿಲೆ ಪತ್ತೆಯ ಬೆನ್ನಲ್ಲೇ, ಇಂದು ನಿಜವಾದ ಹಾವು ಪತ್ತೆಯಾಗಿದೆ. ನಿಜವಾದ ಹಾವು ಕಂಡ ಕೂಡಲೇ ಸ್ಥಳೀಯರಲ್ಲಿ ಭಯ ಹೆಚ್ಚಿದೆ.








