ಬೆಂಗಳೂರು : ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಬರ್ಬರವಾಗಿ ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳು ಅವರನ್ನು ಅಪಹರಿಸಿ ಮಾರುಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳು 25 ಲಕ್ಷ ರೂಪಾಯಿ ಸುಪಾರಿ ಪಡೆದು ಗೋಪಾಲ್ ಎನ್ನುವ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ.
ತಮಿಳುನಾಡಿನ ಡಂಕಣಿಕೋಟೆಯಲ್ಲಿ ಗೋಪಾಲ ಶವ ಪತ್ತೆಯಾಗಿದೆ. 25 ಲಕ್ಷ ಸುಪಾರಿ ನೀಡಿದ್ದು ರಿಯಲ್ ಎಸ್ಟೇಟ್ ಏಜೆಂಟ್ ಮೋಹನ್ ಎಂದು ತಿಳಿದುಬಂದಿದೆ. ಏಜೆಂಟ್ ಗೋಪಾಲ್ ಕಿಡ್ನಾಪ್ ಆಗುತ್ತದೆ. ಆನೇಕಲ್ ಬಳಿ ಟಾಟಾ ಏಸ್ ಗೆ ಡಿಕ್ಕಿ ಹೊಡೆದು ಗೋಪಾಲನ್ನು ಕಿಡಿಗೇಡಿಗಳು ಅವರ ಮುಖಕ್ಕೆ ಸ್ಪ್ರೇ ಹಾಕಿ ಅಪಹರಿಸುತ್ತಾರೆ. ಬಳಿಕ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಗೋಪಾಲ್ ನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ.
ನಂತರ ತಮಿಳುನಾಡಿನ ಡೆಂಕಣಕೋಟೆಯಲ್ಲಿ ಶವ ಬಿಸಾಡಿದ್ದಾರೆ. ಈ ಕುರಿತು ಆನೇಕಲ್ ಠಾಣೆಗೆ ಗೋಪಾಲ್ ಪತ್ನಿ ದೂರು ಕೊಟ್ಟಿದ್ದಾರೆ. ಮೋಹನ್ ಬಾಬು, ಹರೀಶ್ ಕಿರಣ್ ವಿರುದ್ಧ ಈ ಒಂದು ಆರೋಪ ಬಂದಿದ್ದು ಇದೀಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. 9 ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ 7 ತಂಡ ರಚನೆ ಮಾಡಿ ಪೊಲೀಸರು ಹುಡುಕಾಟ ನಡೆಸಿದ್ದು ಇದೀಗ ಗೋಪಾಲ ಶವವಾಗಿ ಪತ್ತೆಯಾಗಿದ್ದಾರೆ.








