ಗೋವಾ : ಕಳೆದ ವರ್ಷ ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣ ಬಾರಿ ಸದ್ದು ಮಾಡಿತ್ತು. ಬಳಿಕ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಇದೇ ರೀತಿ ಗೋವಾದಲ್ಲಿ ಪ್ರಕರಣ ನಡೆದಿದ್ದು ಬಿಜೆಪಿಯ ಕೌನ್ಸಿಲರ್ ಮಗ 30 ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಸದ್ಯ ಪೋಲಿಸಿರುವ ಆತನನ್ನು ಅರೆಸ್ಟ್ ಮಾಡಿದ್ದಾರೆ.
ಹೌದು ದಕ್ಷಿಣ ಗೋವಾದ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯಕ್ ಪುತ್ರ ಸೋಹಂ ನಾಯಕ್ (20) ಬಂಧಿತ ಆರೋಪಿಯಾಗಿದ್ದಾನೆ. ಈತ 30ಕ್ಕೂ ಹೆಚ್ಚು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದು ಅಲ್ಲದೆ ಅವುಗಳನ್ನು ವಿಡಿಯೋ ಮಾಡಿ ಬಾಲಕಿಯರಿಗೆ ಬೆದರಿಸುತ್ತಿದ್ದ ಈ ಒಂದು ವಿಡಿಯೋ ಅವರ ಸ್ನೇಹಿತರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಆರೋಪಿತನಿಗೆ ಕುಡಿತದ ಚಟ ಇತ್ತು ಈ ಹಿನ್ನಲೆ ಕುಡಿದ ನಶೆಯಲ್ಲಿ ತಾನು ಬಾಲಕಿಯರ ಜೊತೆಗೆ ಮಾಡಿದ್ದ ದುಷ್ಕೃತ್ಯ ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ನಶೆಯಲ್ಲಿ ತನ್ನ ಸ್ನೇಹಿತರಿಗೆ ಫಾರ್ವರ್ಡ್ ಮಾಡಿದ್ದಾನೆ. ಬಳಿಕ ಆತನ ಸ್ನೇಹಿತರು ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೆ, ಗೋವಾದಲ್ಲಿ ತೀವ್ರ ಆಕಾಶ ವ್ಯಕ್ತವಾಗಿತ್ತು. ವೈರಲ್ ವಿಡಿಯೋಗಳನ್ನು ಆಧರಿಸಿ ಸದ್ಯ ಪೊಲೀಸರು ಬಿಜೆಪಿ ನಾಯಕನ ಪುತ್ರನನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.






