ಬೆಂಗಳೂರು : ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಬಾಲಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಬೆಂಗಳೂರಿನ ಒಂದನೇ ಎಫ್ ಟಿ ಎಸ್ ಸಿ ಕೋರ್ಟ್ ನ ಸರಸ್ವತಿ ಕೆ.ಎನ್ ಪ್ರಕರಣದ ಕುರಿತು ತೀರ್ಪು ನೀಡಿದ್ದಾರೆ.
ಅವಲಹಳ್ಳಿ 2022 ಸೆಪ್ಟೆಂಬರ್ 18ರಲ್ಲಿ ಈ ಒಂದು ಅತ್ಯಾಚಾರ ಪ್ರಕರಣ ನಡೆದಿತ್ತು. ಬಾಲಕಿಯನ್ನು ಮನೆಗೆ ಎಳೆದುದೋಯ್ದು ಬಾಲಕ ಅತ್ಯಾಚಾರ ಎಸಗಿದ್ದ. ಈ ವೇಳೆ ಬಾಲಕನನ್ನು ಹಿಡಿಯಲು ಹೋದ ಸಾಕ್ಷಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಅಪ್ರಾಪ್ತ ಬಾಲಕನ ವಿರುದ್ಧ ಸೆಕ್ಷನ್ 4 (2) ರ ಅಡಿಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು.
ಗರಿಷ್ಠ ಶಿಕ್ಷೆ ವಿಧಿಸುವಂತೆ ಸರ್ಕಾರಿ ಪಿಪಿ ಬಿಕೆ ಕಾಮಾಕ್ಷಿ ಅವರು ಜಡ್ಜ್ ಗೆ ಮನವಿ ಮಾಡಿದರು.ಈ ವೇಳೆ ಜಡ್ಜ್ 20 ವರ್ಷ ಸಾದಾ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದರು. ಬಾಲಕನಿಗೆ 21 ವರ್ಷ ತುಂಬುವವರೆಗೆ ಸಂರಕ್ಷಿತ ಸ್ಥಳದಲ್ಲಿ ಇರಿಸಬೇಕು. 21 ವರ್ಷದ ಬಳಿಕ ವಯಸ್ಕ ಅಪರಾಧಿಯಂತೆ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು.