ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಾಲ್ವರು ಶಂಕಿತರನ್ನು ವಶಪಡಿಸಿಕೊಂಡಿದ್ದು ಅಜ್ಞಾತ ಸ್ಥಳದಲ್ಲಿ ಗುಪ್ತಚರ ಇಲಾಖೆಯ ವಿಚಾರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಾಲ್ವರನ್ನು ವಶಪಡಿಸಿಕೊಂಡಿದ್ದು, ಅಜ್ಞಾತ ಸ್ಥಳದಲ್ಲಿ ಗುಪ್ತಚರ ಇಲಾಖೆಯಿಂದ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ನಿನ್ನೆ ಕೆಫೆಯಲ್ಲಿ ವ್ಯಕ್ತಿ ಒಬ್ಬ ಬಿಳಿ ಬಣ್ಣದ ಹತ್ತು ನಂಬರ್ ಇರುವ ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್ ಹಾಕಿ ಓಡಾಡಿಕೊಂಡಿರುವಂತಹ ವ್ಯಕ್ತಿಯನ್ನು ಹೋಲುವಂತಹ ನಾಲ್ಕು ಜನರನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದು ಅಜ್ಞಾತ ಸ್ಥಳದಲ್ಲಿ ಆ ನಾಲ್ವರನ್ನು ವಿಚಾರಣೆಗೆ ಒಳಪಡಿಸಿದೆ ಎಂದು ತಿಳಿದುಬಂದಿದೆ.
ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರದ ವಿವಿಧ ತನಿಖಾ ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.
ಅಲ್ಲದೆ ಘಟನಾ ಸ್ಥಳಕ್ಕೆ ಕೇಂದ್ರ ತನಿಖಾ ತಂಡಗಳು ಭೇಟಿ ನೀಡಿದ್ದು, ಇದೀಗ NSG ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ತಡರಾತ್ರಿಯವರೆಗೂ ಕೇಂದ್ರ ಗುಪ್ತಚರ ಇಲಾಖೆ ಭೇಟಿ ನೀಡಿದ್ದು ತೀವ್ರ ಶೋಧ ನಡೆಸುತ್ತಿದೆ. ಎಫ್ಎಸ್ಎಲ್, ಸೊಕೋ ಟೀಮ್, ಬಾಂಬ್ ಸ್ಕ್ವಾಡ್ನಿಂದಲೂ ಶೋಧ ನಡೆಯುತ್ತಿದೆ. ISD , NIA ಬಳಿಕ ಇದೀಗ IB ತಂಡವು ಭೇಟಿ ನೀಡಿದೆ. ತಡರಾತ್ರಿ ಕೆಫೆಯ ಇಂಚಿಂಚು ಜಾಗವನ್ನು ಶೋಧ ತಂಡಗಳು ಜಾಲಾಡಿವೆ ಎಂದು ತಿಳಿದುಬಂದಿದೆ.
ಈಗ ಬಾಂಬ್ ಇಟ್ಟಿರುವ ವ್ಯಕ್ತಿಯ ಪತ್ತೆಯಾಗಿದ್ದು, ನಿನ್ನೆ ಕೆಫೆಯಲ್ಲಿ ವ್ಯಕ್ತಿ ಒಬ್ಬ ಬಿಳಿ ಬಣ್ಣದ ಹತ್ತು ನಂಬರ್ ಇರುವ ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್ ಧರಿಸಿದ್ದಾನೆ ಅಲ್ಲದೇ ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್ ಅನ್ನು ಹಾಕಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಹೋಟೆಲ್ನಲ್ಲಿ ಇಡ್ಲಿಯನ್ನು ತಿನ್ನುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದ್ದು ಘಟನೆ ನಡೆದ ನಂತರ ಅಲ್ಲಿಂದ ಆರೋಪಿ ಕಾಲ್ಕಿತ್ತಿದ್ದಾನೆ.
ಇದೀಗ ಕೇರಳ ತಮಿಳುನಾಡು ಆಂಧ್ರಕ್ಕೆ ಆರೋಪಿ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದ್ದು, ಇದೀಗ ಶೋಧ ಕಾರ್ಯ ನಡೆಸಲು ವಿವಿಧ ತಂಡಗಳನ್ನು ರಚಿಸಲಾಗಿದೆ. ಆದಷ್ಟು ಬೇಗ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.