ಬೆಂಗಳೂರು : ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ನಡೆದಂತಹ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ NIA ಅಧಿಕಾರಿಗಳು ಈಗಾಗಲೇ ಹಲವರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಇದೀಗ ಪ್ರಮುಖ ಆರೋಪಿಯಾದ ಮುಜಾಮಿಲ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಪೋಟಕವಾದ ಮಾಹಿತಿ ಹೊರ ಬಿದ್ದಿದೆ.
ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್ಐಎ ತೀವ್ರ ತನಿಖೆ ನಡೆಸುತ್ತಿದ್ದು, ಒಂದೊಂದೇ ವಿಚಾರಗಳು ಬಹಿರಂಗವಾಗುತ್ತಿದೆ. ಇದೀಗ ಮತ್ತೊಂದು ಸ್ಫೋಟಕ ವಿಚಾರ ಬಯಲಾಗಿದೆ. ಪ್ರಮುಖ ಆರೋಪಿ ಮುಜಾಮಿಲ್ ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಜೊತೆ ಸಂಪರ್ಕದಲ್ಲಿದ್ದ ವಿಚಾರ ಎನ್ಐಎಗೆ ತಿಳಿದುಬಂದಿದ್ದು, ತನಿಖೆ ಚುರುಕುಗೊಂಡಿದೆ.
ಹೌದು ಕಳೆದ ಒಂದು ವರ್ಷದ ಹಿಂದೆ ಮಂಗಳೂರಿನಲ್ಲಿ ಆರೋಪಿ ಮುಜಾಮಿಲ್ ಪೊಲೀಸ್ ಇನ್ಸ್ಪೆಕ್ಟರ್ ಸಹಾಯದಿಂದ ಬಾಡಿಗೆ ಮನೆಯ ಪಡೆದಿದ್ದ, ಅಲ್ಲದೆ ತನ್ನ ಹೆಸರಲ್ಲಿ ಮನೆಯನ್ನು ಪಡೆದು ತಾಯಿಯೊಂದಿಗೆ ವಾಸಿಸುತ್ತಿದ್ದ ಎನ್ನಲಗುತ್ತಿದೆ ಎಂಬ ಸ್ಪೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ.
ಬಾಡಿಗೆ ಮನೆ ಕೊಡಿಸುವಂತೆ ಮುಜಾಮಿಲ್, ಪೊಲೀಸ್ ಇನ್ಸ್ಪೆಕ್ಟರ್ ಸಹಾಯ ಕೇಳಿದ್ದಾನೆ. ಚಿಕ್ಕಮಗಳೂರು ನಗರದ ಅಯ್ಯಪ್ಪ ನಗರದಲ್ಲಿರುವ ಮಾಲೀಕರೊಬ್ಬರನ್ನು ಸಂಪರ್ಕಿಸಿ ಮುಜಾಮಿಲ್ಗೆ ಬಾಡಿಗೆ ಮನೆ ನೀಡುವಂತೆ ಇನ್ಸ್ಪೆಕ್ಟರ್ ಸೂಚಿಸುತ್ತಾರೆ. ಅದರಂತೆ, ಮುಜಾಮಿಲ್ಗೆ ಮಾಲೀಕರು ಬಾಡಿಗೆ ಮನೆ ನೀಡಿದ್ದರು.
6 ತಿಂಗಳಿನಿಂದ ಅಯ್ಯಪ್ಪ ನಗರದ ಬಾಡಿಗೆ ಮನೆಯಲ್ಲೇ ಇದ್ದ ಮುಜಾಮಿಲ್, ರಾಮೇಶ್ವರಂ ಕೆಫೆ ಸ್ಫೋಟ ನಡೆಯುವ 20 ದಿನದ ಹಿಂದೆ ಬೆಂಗಳೂರಿಗೆ ತೆರಳಿದ್ದನು. ಬಳಿಕ ಮುಜಾಮಿಲ್ ಬಂಧನ ಬೆನ್ನಲೇ ಆತನ ತಾಯಿ ಬಾಡಿಗೆ ಮನೆಗೆ ಬೀಗ ಹಾಕಿ ಹೋಗಿದ್ದಾರೆ.ಈ ವಿಚಾರ ತಿಳಿಯುತ್ತಿದ್ದಂತೆ ಎನ್ಐಎ ಅಧಿಕಾರಿಗಳು, ಅಯ್ಯಪ್ಪ ನಗರದ ಬಾಡಿಗೆ ಮನೆಯ ಮೇಲು ದಾಳಿ ಮಾಡಿದ್ದರು. ಆದರೆ, ಕಳೆದ ಮೂರು ದಿನಗಳಿಂದ ಬಾಡಿಗೆ ಮನೆಗೆ ಬೀಗ ಹಾಕಲಾಗಿದೆ. ಸದ್ಯ, ಮುಜಾಮಿಲ್ಗೆ ಬಾಡಿಗೆ ಮನೆ ಕೊಡಿಸಿದ್ದ ಇನ್ಸ್ಪೆಕ್ಟರ್ ಕುರಿತು ಎನ್ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.