ರಾಯಚೂರು : ರಾಯಚೂರಿನ ರಾಮಕೃಷ್ಣ ಆಶ್ರಮದಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದ್ದು, ಪೆನ್ನು ಕದ್ದ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯನ್ನು ರೂಮಿನಲ್ಲಿ ಕೂಡಿ ಹಾಕಿ ಗುರೂಜಿ ಮನಬಂದಂತೆ ಥಳಿಸಿ ವಿಕೃತಿ ಮೆರೆದಿದ್ದಾರೆ.
ಆಶ್ರಮದ ಗುರೂಜಿ ಇಂತಹ ಕೃತ್ಯ ಎಸಗಿದ್ದು,ವಿದ್ಯಾರ್ಥಿಯನ್ನು ಕೂಡಿಹಾಕಿ ಥಳಿಸಿದ್ದು, ಸದ್ಯ ವಿಕೃತ ಗುರೂಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಶ್ರವಣ ಕುಮಾರ್ ಹಲ್ಲೆಗೊಳಗಾದ ವಿದ್ಯಾರ್ಥಿ.
ಆಶ್ರಮದಲ್ಲಿ ತಂಗಿದ್ದ ಶ್ರವಣ ಕುಮಾರ್ ಸಹಪಾಠಿಗಳ ಜೊತೆ ಆಟವಾಡುತ್ತ ಪೆನ್ನು ಕದ್ದಿದ್ದ ಎನ್ನುವ ಕಾರಣಕ್ಕೆ ಆಶ್ರಮದ ಗುರೂಜಿ ವೇಣುಗೋಪಾಲ ಎಂಬುವವರು ವಿದ್ಯಾರ್ಥಿ ಶ್ರವಣ ಕುಮಾರ್ ನನ್ನು ಥಳಿಸಿದ್ದಾರೆ. ಪ್ರಕರಣ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಆರೋಪಿ ಗುರೂಜಿ ವೇಣುಗೋಪಾಲನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.