ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ ಜನವರಿ 22ರಂದು ಉತ್ತರ ಪ್ರದೇಶದ ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಯಿತು. ಇದೀಗ ಶ್ರೀರಾಮ ಮಂದಿರ ನೋಡಲು ಬೆಂಗಳೂರಿನಿಂದ ಅಯೋಧ್ಯೆಗೆ ಮೊದಲ ವಿಶೇಷ ರೈಲು ಹೊರಟಿದೆ.
ಬೆಂಗಳೂರಿನಿಂದ ಅಯೋಧ್ಯೆಗೆ ಮೊದಲ ವಿಶೇಷ ರೈಲು ಹೊರಟಿದ್ದು, ಅಯೋಧ್ಯ ಶ್ರೀರಾಮದರ್ಶನ ಅಭಿಯಾನದಲ್ಲಿ ವಿಶೇಷ ರೈಲಿನಲ್ಲಿ ಬಿಜೆಪಿ ಕಾರ್ಯಕರ್ತರು ತೆರಳಿದ್ದಾರೆ. ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣದಿಂದ ವಿಶೇಷ ರೈಲಿಗೆ ಚಾಲನೆ ನೀಡಲಾಯಿತು.
ಸಂಸದ ಪಿಸಿ ಮೋಹನರಿಂದ ಮೊದಲ ರೈಲಿಗೆ ಚಾಲನೆ ನೀಡಲಾಯಿತು.ಮೂರು ಲೋಕಸಭಾ ಕ್ಷೇತ್ರಗಳ 1450 ಕಾರ್ಯಕರ್ತರು ಪ್ರವಾಸ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಮುಂಜಾನೆ 3.40 ಅಯೋಧ್ಯ ಪ್ರವಾಸಕ್ಕೆ ವಿಶೇಷ ರೈಲಿಗೆ ಚಾಲನೆ ನೀಡಲಾಗಿದೆ.
ಫೆಬ್ರವರಿ 16ರ ಮಧ್ಯಾನ ಆಯೋಧ್ಯೆಯನ್ನು ಕಾರ್ಯಕರ್ತರು ತಲುಪಲಿದ್ದಾರೆ. ಬಳಿಕ ದರ್ಶನ ಮುಗಿಸಿ 17ರ ಬೆಳಿಗ್ಗೆ 5 ಗಂಟೆಗೆ ಅಲ್ಲಿಂದ ರೈಲು ಮತ್ತೆ ರೈಲು ಮರಳಲಿದೆ. ಫೆಬ್ರವರಿ 20ರ ಬೆಳಿಗ್ಗೆ ವಿಶೇಷ ರೈಲು ಬೆಂಗಳೂರು ತಲುಪುತ್ತದೆ ಎಂದು ಹೇಳಲಾಗುತ್ತಿದೆ.