ಬೆಂಗಳೂರು : ನಿರ್ದೇಶಕ ಹಾಗೂ ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಬ್ಯಾಚುಲರ್ಸ್ ಪಾರ್ಟಿಯಲ್ಲಿ ಎರಡು ಚಿತ್ರಗಳ ಹಾಡನ್ನು ಬಳಸಿ ಕಾಪಿ ರೈಟ್ಸ್ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ FIR ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ರಕ್ಷಿತ್ ಶೆಟ್ಟಿ ಯಶವಂತಪುರ ಠಾಣೆಗೆ ವಿಚಾರಣೆಗೆ ಹಾಜರಾದರು.
ಹೌದು ‘ನ್ಯಾಯ ಎಲ್ಲಿದೆ’ ಹಾಗೂ ‘ಒಮ್ಮೆ ನಿನ್ನನ್ನು ಕಣ್ತುಂಬ ನೋಡುವಾಸೆ’ ಎಂಬ ಎರಡು ಹಾಡುಗಳನ್ನು ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ನಿರ್ದೇಶನದ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಬಳಸಿದ್ದರು. ಈ ಹಿನ್ನಲೆಯಲ್ಲಿ MRT ಮ್ಯೂಸಿಕ್ ಸಂಸ್ಥೆಯ ಪಾಲುದಾರ ನವೀನ್ ಕುಮಾರ್ ಎಂಬುವರು ಯಶವಂತಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹಾಗಾಗಿ ನಟ ರಕ್ಷಿತ್ ಶೆಟ್ಟಿ ಅವರು ಇಂದು ಯಶವಂತಪುರ ಠಾಣೆಗೆ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ. ತಮ್ಮ ಮೇಲಿರುವ ಎಫ್ ಐ ಆರ್ ರದ್ದು ಕೋರಿ ಈ ಹಿಂದೆ ಅವರು ಕೋರ್ಟ್ ಮೊರೆ ಕೂಡ ಹೋಗಿದ್ದರು. ಠಾಣೆಯಲ್ಲಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.