ರಾಯಚೂರು : ಬಟ್ಟೆ ತೊಳೆಯುವಾಗ ತಾಯಿ ಮಗಳು ಇಬ್ಬರು ಕಾಲುವೆಯಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಬಿ ಯದ್ಲಾಪುರ ಗ್ರಾಮದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.
ತಾಯಿ ಸುಜಾತ (27) ಮಗಳು ಶ್ರಾವಣಿ (10) ಕೊಚ್ಚಿ ಹೋದವರು ಎಂದು ತಿಳಿದು ಬಂದಿದೆ. ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ತಾಯಿ ಹಾಗೂ ಮಗಳು ಕೊಚ್ಚಿ ಹೋಗಿದ್ದಾರೆ. ತಾಯಿಯ ಶವ ಪತ್ತೆಯಾಗಿದ್ದು, ಪುತ್ರಿಯ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.