ರಾಯಚೂರು : ಯುಗಾದಿ ಹಬ್ಬದ ದಿನದಂದೇ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಮುಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅಕ್ಕನನ್ನು ಬಿಡಿಸಲು ಬಂದ ತಂಗಿಯ ಮೇಲು ಮಚ್ಚಿನಿಂದ ಹಲ್ಲೆ ನಡೆಸಿ ಪಾಪಿ ಪತಿ ಪರಾರಿಯಾಗಿರುವ ಘಟನೆ ರಾಯಚೂರು ತಾಲೂಕಿನ ಏಗನೂರು ಎಂಬ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೆ ಒಳಗಾದ ಪತ್ನಿ ಪದ್ಮಾವತಿ (33) ಹಾಗೂ ಆಕೆಯ ತಂಗಿ ಭೂದೇವಿ (23) ಮೇಲೆ ಪದ್ಮಾವತಿ ಪತಿ ತಿಮ್ಮಪ್ಪ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಮಚ್ಚಿನಿಂದ ದಾಳಿ ನಡೆಸಿದ ಪದ್ಮಾವತಿ ಪತಿ ತಿಮ್ಮಪ್ಪ ಯಾದವ್ ಪತ್ನಿ ಜೊತೆಗೆ ಜಗಳವಾಡಿ 2ನೇ ಮದುವೆಯಾಗಿದ್ದ. ತಿಮ್ಮಪ್ಪ ಯಾದವ್ ಜೀವನಾಂಶ ಮತ್ತು ಜಮೀನಿನಲ್ಲಿ ಪಾಲು ಕೋರಿ ಪತ್ನಿ ಪದ್ಮಾವತಿ ನ್ಯಾಯಾಲಯ ಮೆಟ್ಟಿಲೇರಿದ್ದಳು.
ಕೋರ್ಟ್ ಆದೇಶ ಪಾಲಿಸಿದ ಹಿನ್ನೆಲೆಯಲ್ಲಿ ತಿಮ್ಮಪ್ಪ ಯಾದವ್ ಜೈಲು ಪಾಲಾಗಿದ್ದ. ಬಳಿಕ 50,000 ಹಣ ನೀಡಿ ಸೆಟಲ್ಮೆಂಟ್ ಮಾಡಿಕೊಂಡಿದ್ದ. ಈಗ ಏಕಾಏಕಿ ಪತ್ನಿ ಮೇಲೆ ತಿಮ್ಮಪ್ಪ ಮೆಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಅಕ್ಕನ ರಕ್ಷಣೆಗೆ ಬಂದ ತಂಗಿ ಭೂದೇವಿ ಮೇಲು ತಿಮ್ಮಪ್ಪ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇಬ್ಬರ ಮೇಲೆ ಹಲ್ಲೆ ನಡೆಸಿ ಆರೋಪಿ ತಿಮ್ಮಪ್ಪ ಪರಾರಿಯಾಗಿದ್ದಾನೆ. ಗಾಯಗೊಂಡ ಪದ್ಮಾವತಿ ಹಾಗೂ ಭೂದೇವಿಯನ್ನು ರಿಮ್ಸ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.