ರಾಯಚೂರು : ಕೆಟ್ಟ ಚಟಗಳಿಗೆ ದಾಸರಾಗಿರುವ ಈಗಿನ ಮಕ್ಕಳಿಗೆ ಹೆತ್ತವರು ಬುದ್ಧಿ ಹೇಳುವುದಕ್ಕೂ ಹೆದರಿಕೊಳ್ಳುವಂತಾಗಿದೆ. ಮಧ್ಯ ಸೇವಿಸ ಬೇಡ ಎಂದು ಅಪ್ಪ ಬುದ್ಧಿ ಹೇಳಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ನಡೆದಿದೆ.
ನೇರವಾಗಿ ‘ಗ್ಯಾಸ್ ಉರಿಯಲ್ಲಿ’ ರೊಟ್ಟಿ ಬೇಯಿಸುವುದನ್ನು ನಿಲ್ಲಿಸಿ! ಕಾರಣ ಇಲ್ಲಿದೆ
ಹೌದು ಮದ್ಯಸೇವನೆ ಮಾಡಬೇಡವೆಂದು ಅಪ್ಪ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಮಗ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಆದರ್ಶ (24) ವರ್ಷದ ಯುವಕ ಮೃತ ದುರ್ದೈವಿ ಎಂದು ಹೇಳಲಾಗುತ್ತಿದೆ.
BREAKING : ಬೆಂಗಳೂರು ಏರ್ಪೋರ್ಟ್ ನಲ್ಲಿ ‘ಅಕ್ರಮ ಚಿನ್ನ’ ಸಾಗಣೆ : ‘22.5 ಲಕ್ಷ’ ಮೌಲ್ಯದ ಚಿನ್ನ ಜಪ್ತಿ,
ಮಾನ್ವಿ ಪಟ್ಟಣದಲ್ಲಿ ಹೇರ್ ಕಟಿಂಗ್ ಶಾಪ್ ಹೊಂದಿದ್ದ ಯುವಕ. ಆದರೆ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದರಿಂದ ಮಗ ಹಾಳಾಗುತ್ತಿದ್ದಾನೆಂದು ತಂದೆ ಮದ್ಯಸೇವನೆ ಬಿಡುವಂತೆ ಬುದ್ಧಿವಾದ ಹೇಳಿದ್ದ. ಈ ವಿಚಾರವಾಗಿ ಅಪ್ಪನೊಂದಿಗೆ ಆದರ್ಶ ಗಲಾಟೆ ಮಾಡಿಕೊಂಡಿದ್ದ.
BREAKING : ‘ಸಿಎಂಗೆ’ ಮತ್ತೆ ಸಂಕಷ್ಟ : ‘ಲಂಚ ಪ್ರಕರಣ’ದಲ್ಲಿ ಮರು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಕೋರ್ಟ್ ಸೂಚನೆ
ಅಪ್ಪನ ಮಾತಿಗೆ ಮನನೊಂದು ಬಾತ್ ರೂಂನ ಪೈಪ್‌ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಧರ್ಮಸ್ಥಳಕ್ಕೆ ಮಾನ್ವಿ ಪಟ್ಟಣ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಸದ್ಯ ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.