ಹೈದ್ರಾಬಾದ್ : ಕಳೆದ ವರ್ಷ 2024 ಡಿಸೆಂಬರ್ 4ರಂದು ಇಡೀ ದೇಶದಾದ್ಯಂತ ಅಲ್ಲು ಅರ್ಜುನ್ ನಾಯಕ ನಟರಾಗಿ ನಟಿಸಿದ್ದ ಪುಷ್ಪ-2 ಸಿನೆಮಾ ಬಿಡುಗಡೆ ಆಗಿತ್ತು. ಇದೀಗ ಬಿಡುಗಡೆಯಾಗಿ ಕೇವಲ 28 ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ಪುಷ್ಪ-2ಸಿನಿಮಾ ಬಿಡುಗಡೆಯಾದ ದಿನದಿಂದ 28 ದಿನಗಳಲ್ಲಿ 1,799 ಕೋಟಿ ರೂಪಾಯಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಈ ಕುರಿತಂತೆ ಮೈತ್ರಿ ಮೂವಿ ಮೇಕರ್ಸ್ ಮಾಹಿತಿ ಹಂಚಿಕೊಂಡಿದ್ದು, ಕಳೆದ 28 ದಿನಗಳಲ್ಲಿ ಪುಷ್ಪ 2 ಸಿನಿಮಾ 1899 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ತಿಳಿಸಿದೆ. ಹಿಂದಿ ಅವತರಣಿಕೆಯಿಂದ 716.65 ಕೋಟಿ, ತೆಲುಗಿನಲ್ಲಿ 316.3 ಕೋಟಿ, ತಮಿಳಿನಲ್ಲಿ 55.35 ಕೋಟಿ, ಮಲಯಾಳಂನಲ್ಲಿ 14.07 ಕೋಟಿ ಹಾಗೂ ಕನ್ನಡದಲ್ಲಿ 7.48 ಕೋಟಿ ರೂ. ಗಳಿಕೆಯಾಗಿದೆ.
ಮೈತ್ರಿ ಮೂವಿ ಮೇಕರ್ಸ್ ಪುಷ್ಪ-2 ಚಿತ್ರವು 21ನೇ ದಿನದಾಂತ್ಯಕ್ಕೆ ಜಾಗತಿಕವಾಗಿ 1799 ಕೋಟಿ ರೂ. ಗಳಿಸಿದೆ ಎಂದು ಟ್ವೀಟ್ ಮಾಡಿದೆ. ಈ ಹಿಂದೆ “ಬಾಹುಬಲಿ-2′ ಚಿತ್ರ 1030 ಕೋಟಿ ಗಳಿಸಿತ್ತು.