ಬೆಂಗಳೂರು : ರಾಜ್ಯದಲ್ಲಿ 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ಹೆಚ್ಚಿನ ತನಿಖೆಗಾಗಿ sit ರಚನೆಗೆ ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
‘ಬೂಟು’ ತಗೊಂಡು ಹೊಡಿತೀನಿ : ಸಂಗಣ್ಣ ಕರಡಿ ಬೆಂಬಲಿಗರ ವಿರುದ್ಧ ‘MLC’ ಹೇಮಲತಾ ನಾಯಕ್ ಗುಡುಗು
ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಸಂಬಂಧ ಬಿ ವೀರಪ್ಪ ಸಮಿತಿ ರಚಿಸಿದ್ದೆವು. ಸರ್ಕಾರಿ ಹಾಗೂ ಖಾಸಗಿ ವ್ಯಕ್ತಿಗಳು ಸೇರಿ 113 ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನೀರಿನ ವಿಚಾರದಲ್ಲಿ ಅಸೂಯೆಯಿಂದ ಬಿಜೆಪಿ ಅಪಪ್ರಚಾರ – ಡಿಸಿಎಂ ಡಿ.ಕೆ ಶಿವಕುಮಾರ್
ಪ್ರಕರಣ ಸಂಬಂಧ ಎಸ್ಐಟಿ ಹೆಚ್ಚಿಸಬೇಕೆಂದು ನ್ಯಾ. ಬಿ ವಿರಪ್ಪ ಹೇಳಿದ್ದಾರೆ ಹಾಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ತನಿಖೆಗಾಗಿ ತೀರ್ಮಾನ ಮಾಡಿದ್ದೇವೆ ಎಂದು ವಿಧಾನಸೌಧದಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣ ಬೇರೇಗೌಡ ತಿಳಿಸಿದರು.
ಮೆಟ್ರೋ 3ನೆ ಹಂತದ ಕಾಮಗಾರಿಗೆ ಸಂಪುಟ ಒಪ್ಪಿಗೆ
ಜೆಪಿ ನಗರ, ಸಿಲ್ಕ್ ಬೋರ್ಡ್ನಿಂದ ಕೆಲಸ ನಡೆದಿದೆ. ಸಿಲ್ಕ್ ಬೋರ್ಡ್ನಿಂದ ಹೆಬ್ಬಾಳ ಮೇಲ್ಸೇತುವವರೆಗೆ ಬಂದಿದೆ. ಸುಮಾರು 35.5 ಕಿ.ಲೋ ಮೀಟರ್ವರೆಗೆ ನಡೆಯಲಿದೆ. ಮೂರನೇ ಹಂತದ 15,611 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತುಕೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
BREAKING : ಗದಗದಲ್ಲಿ ಹಣ ಹಂಚಿಕೆ ವಿಚಾರವಾಗಿ ಗಲಾಟೆ : ಮೊದಲ ಹೆಂಡತಿಯ ಮಕ್ಕಳಿಂದ ತಂದೆಯ ಭೀಕರ ಕೊಲೆ