ಗದಗ : ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಗೆ ಪಿಎಸ್ಐ ಅಧಿಕಾರಿ ಒಬ್ಬ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಇದೀಗ ಕೇಳಿಬಂದಿದ್ದು, ಪೊಲೀಸ್ ಠಾಣೆ ಬಳಿ ವಿದ್ಯಾರ್ಥಿನಿ ಜೊತೆಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಕಾಲೇಜಿಗೆ ತೆರಳುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಜೊತೆಗೆ ಪಿಎಸ್ಐ ನಿಖಿಲ್ ಕಾಂಬಳೆ ಎನ್ನುವವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗುತ್ತಿದ್ದು. ನರೇಗಲ್ ಪೊಲೀಸ್ ಠಾಣೆಯ ಪಿಎಸ್ಐ ನಿಖಿಲ್ ಕಾಂಬ್ಳೆ ವಿದ್ಯಾರ್ಥಿನೀ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ ಕಾನ್ಸ್ಟೇಬಲ್ ಶಂಕರ್ ನಲ್ಕರ್ ವಿರುದ್ಧ ಕೂಡ ಆ ಆರೋಪ ಕೇಳಿ ಬಂದಿದೆ.
ಯುವತಿಯ ನಂಬರ್ ಪಡೆದು ಮೆಸೇಜ್ ಮಾಡಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಅಶ್ಲೀಲವಾಗಿ ಮೆಸೇಜ್ ಮಾಡಿ ಪೊಲೀಸರಿಂದ ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಡುತ್ತಿದ್ದು, ಎಸ್‌ಪಿ ಗಮನಕ್ಕೆ ತರುತ್ತೇವೆ ಎಂದರು ಕೂಡ ಪೊಲೀಸರು ತಲೆಕೆಡಿಸಿಕೊಂಡಿಲ್ಲ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಇದೀಗ ಮನವಿ ಮಾಡಿದ್ದಾರೆ.