ತುಮಕೂರು : ನಿನ್ನೆ ತಾನೆ ಬೆಂಗಳೂರಿನಲ್ಲಿ ಚೀಟಿ ವ್ಯವಹಾರ ಸಂಬಂಧ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಒಂದು ಲಕ್ಷ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರು ಇನ್ಸ್ಪೆಕ್ಟರ್ ನನ್ನ ಅರೆಸ್ಟ್ ಮಾಡಿದ್ದಾರೆ. ಇದೀಗ ತುಮಕೂರಿನಲ್ಲಿ ಸಹ 40,000 ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಪಿಎಸ್ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತುಮಕೂರು ಗ್ರಾಮಾಂತರ ಠಾಣೆ ಪಿಎಸ್ಐ ಚೇತನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 40,000 ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಪಿಎಸ್ಐ ಚೇತನ್ ಕುಮಾರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪಿ ಎಸ್ ಐ ಚೇತನ್ ಕುಮಾರ್ ಕಾರ್ ಒಂದನ್ನು ವಶಕ್ಕೆ ಪಡೆದಿದ್ದರು. ಕಾರಿನಲ್ಲಿ ಅನುಮಾನಾಸ್ಪದ ವಸ್ತುವಿದೆಯೆಂದು ಪಿಎಸ್ಐ ಚೇತನ್ ಕುಮಾರ್ ಅದನ್ನು ಠಾಣೆಗೆ ತಂದಿದ್ದಾರೆ.
ಬಳಿಕ ಕಾರು ಬಿಡದೆ ಪ್ರಕರಣವನ್ನು ಸಹ ದಾಖಲಿಸದೆ 40,000 ಇಲಾಖೆ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರು ಮೂಲದ ವ್ಯಕ್ತಿಯ ಬಳಿ ಚೇತನ್ ಕುಮಾರ್ ಹಣಕ್ಕೆ ಬೇಡಿಕೆ ಇಟ್ಟಿದ್ದ. ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು 40,000 ಫೈನಲ್ ಮಾಡಿದ್ದ ಪಿಎಸ್ಐ ಚೇತನ್ ಕುಮಾರ್ ನಿನ್ನೆ ರಾತ್ರಿ ಹಣ ತಂದು ಕೊಡುವಾಗ ಲೋಕಾಯುಕ್ತ ಕಾರ್ಯಾಚರಣೆ ನಡೆಸಿದೆ.
ಟೋಲ್ ಅಂಗಡಿ ಒಂದರಲ್ಲಿ ಪಿಎಸ್ಐ ಹಣ ಕೊಡಲು ಹೇಳಿದ್ದ. ಅಂಗಡಿಗೆ ಹಣ ಕೊಡಲು ಬರುವವನ ಫೋಟೋವನ್ನು ಪಿಎಸ್ಐ ಚೇತನ್ ಕುಮಾರ್ ವ್ಯಕ್ತಿಗೆ ಕಳುಹಿಸಿದ್ದ. ಅಂಗಡಿ ಅವನ ಮೊಬೈಲ್ ಪರಿಶೀಲನೆಯ ವೇಳೆ ಪಿಎಸ್ಐ ಪಾತ್ರ ಇರುವುದು ಪತ್ತೆಯಾಗಿದೆ. ಪಿಎಸ್ಐ ಚೇತನ್ ಕುಮಾರ್ನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.








