ಬೆಂಗಳೂರು : ಈ ಬಾರಿಯ 2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಶನಿವಾರ ಪ್ರಕಟವಾಗಿದೆ.ಆಕ್ಷೇಪಣೆಗಳನ್ನು ಮಂಡಲಿಯ ಇ-ಮೇಲ್ ವಿಳಾಸ: chairpersonkseab@gmail.comಗೆ ಹಾಗೂ ಹಾರ್ಡ್ ಪ್ರತಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿಗೆ ನಿಗದಿತ ಸಮಯದೊಳಗೆ ಕಳುಹಿಸಬೇಕು. ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ತಿಳಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವೆಬ್‌ಸೈಟ್ www.kseab.karnataka.gov.in ನಲ್ಲಿ ಪರೀಕ್ಷೆ-1, ಪರೀಕ್ಷೆ-2ರ ವೇಳಾಪಟ್ಟಿ ಪ್ರಕಟಿಸಿದೆ. 2026ರ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿಗಳಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 9ರ ವರೆಗೆ ಕಾಲಾವಕಾಶ ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1:
ಮಾ.18 ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ,ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ, ಮಾ.20 ಗಣಿತ, ಮಾ.23 ವಿಜ್ಞಾನ, ಹಿಂದೂ ಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಮಾ.25 ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ, ಮಾ.28 ಸಮಾಜ ವಿಜ್ಞಾನ, ಮಾ.30 ತೃತೀಯ ಭಾಷೆ ಹಿಂದಿ, ಎನ್‌ಎಸ್‌ಕ್ಯೂಎಫ್ ವಿಷಯಗಳು, ಏ.1 ಜೆಟಿಎಸ್ ವಿಷಯಗಳು. ಮೇ 18ರಿಂದ ಎಸ್ಸೆಸ್ಸೆಲ್ಸಿ 2 ಪರೀಕ್ಷೆಗಳು ಆರಂಭವಾಗಲಿವೆ.
ದ್ವಿತೀಯ ಪಿಯುಸಿ ಪರೀಕ್ಷೆ-1
ಫೆ.28 ಕನ್ನಡ, ಆರೇಬಿಕ್, ಮಾ.2 ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, ಮಾ.3 ಇಂಗ್ಲಿಷ್, ಮಾ.4 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮಾ.5 ಇತಿಹಾಸ, ಗೃಹವಿಜ್ಞಾನ, ಮಾ.6 ಭೌತಶಾಸ್ತ್ರ, ಮಾ.7 ಐಚ್ಚಿಕ ಕನ್ನಡ, ವ್ಯವಹಾರ ಅಧ್ಯ ಯನ, ಭೂಗರ್ಭ ಶಾಸ್ತ್ರ, ಮಾ.9 ರಸಾಯನಶಾಸ್ತ್ರ, ಶಿಕ್ಷಣ, ಮೂಲ ಗಣಿತ, ಮಾ.10 ಅರ್ಥಶಾಸ್ತ್ರ, ಮಾ.11 ತರ್ಕ, ಜೀಮಾಸ್ತ್ರ, ವಿದ್ಯುನ್ಮಾನ, ಗಣಕಶಾಸ್ತ್ರ, ಮಾ.12 ಹಿಂದಿ, ಮಾ.13 ರಾಜ್ಯಶಾಸ್ತ್ರ, ಮಾ.14 ಲೆಕ್ಕಶಾಸ್ತ್ರ, ಮಾ.16 ಸಮಾಜಶಾಸ್ತ್ರ, ಗಣಿತ, ಮಾ.17 ಹಿಂದೂಸ್ತಾನಿ ಸಂಗೀತ, ಎನ್‌ಎಸ್‌ಕ್ಯೂಎಫ್ ವಿಷಯಗಳು.
ದ್ವಿತೀಯ ಪಿಯುಸಿ ಪರೀಕ್ಷೆ-2
ಏ.25 ಕನ್ನಡ, ಅರೇ ಬಿಕ್, ಏ.27 ಐಚ್ಚಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕ, ಜೀವ ಶಾಸ್ತ್ರ, ಏ.28 ರಾಜ್ಯಶಾಸ್ತ್ರ, ವಿದ್ಯುನ್ಮಾನ, ಗಣಕಶಾಸ್ತ್ರ, ಮಾ.29 ಗಣಿತ, ಗೃಹವಿಜ್ಞಾನ, ಮೂಲ ಗಣಿತ, ಏ.30 ಅರ್ಥಶಾಸ್ತ್ರ, ಮೇ 2 ಇತಿಹಾಸ, ರಸಾಯನಶಾಸ್ತ್ರ, ಮೇ 4 ಇಂಗ್ಲಿಷ್, ಮೇ 5 ಹಿಂದಿ, ಮೇ 6 ವ್ಯವಹಾರ ಅಧ್ಯ ಯನ, ಭೌತಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೇ 7 ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ, ಮೇ 8 ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ, ಮೇ 9 (ಬೆಳಗ್ಗೆ) ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮೇ 9 (ಮಧ್ಯಾಹ್ನ) ಹಿಂದೂಸ್ತಾನಿ ಸಂಗೀತ, ಎನ್‌ಎಸ್‌ಕ್ಯೂಎಫ್ ವಿಷಯಗಳು,