ಬೆಂಗಳೂರು : ಆಸ್ತಿ ವಿಚಾರವಾಗಿ ತಂದೆ ಹಾಗು ಮಗನ ನಡುವೆ ಗಲಾಟೆ ನಡೆದಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ತಂದೆ ಮಗನ ಮೇಲೆ ಫೈರಿಂಗ್ ನಡೆಸಿದ್ದಾರೆ.
ಮಗ ಹಾಗು ತಂದೆಯ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆದು, ತಂದೆ ಮಗನ ಮೇಲೆ ಗನ್ ನಿಂದ ಶೂಟ್ ಮಾಡಿದ್ದಾರೆ. ತಲೆಗೆ ಶೂಟ್ ಮಾಡಿದ್ದು, ಹರೀಶ್ (30) ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನ ಮೇಲೆ ತಂದೆ ಸುರೇಶ್ ಫೈರಿಂಗ್ ಮಾಡಿದ್ದಾರೆ. ಹಳೆ ಲೋಡ್ ಗನ್ ನಿಂದ ಶೂಟ್ ಮಾಡಿದ್ದಾರೆ. ತಕ್ಷಣ ಸ್ಥಳೀಯರು ಹರೀಶ್ ನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಂದೆ ಸುರೇಶ್ ಮದ್ಯ ಸೇವಿಸಿ ಜಮೀನು ಮಾರಾಟ ಮಾಡಿದ್ದರು. ಇದ್ದ ಜಮೀನು ಮಾರಾಟ ಮಾಡಲು ಹರೀಶ್ ಗೆ ಕಿರುಕುಳ ನೀಡಿದ್ದಾರೆ. ಇದೆ ವಿಚಾರವಾಗಿ ಗಲಾಟೆ ನಡೆದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮರಳೆನಹಳ್ಳಿಯಲ್ಲಿ ನಡೆದಿದೆ.








