ಮೈಸೂರು : ಬೆಂಗಳೂರಲ್ಲಿ ಮಗಳಿಗಾಗಿ ತನ್ನ ಹೆಂಡತಿಯನ್ನೇ ಪತಿ ಅಪರಣ ಮಾಡಿರುವ ಘಟನೆ ವರದಿಯಾಗಿದೆ. ನಟಿ ಚೈತ್ರಾಳನ್ನು ಅಪಹರಿಸಿ ತನ್ನ ಮಗು ನೀಡುವಂತೆ ಪತಿ ಬೇಡಿಕೆ ಇಟ್ಟಿದ್ದಾನೆ. ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ಹೇಳಿಸಿ ಪತ್ನಿಯನ್ನು ಅಪಹರಣ ಮಾಡಿದ್ದಾನೆ. ಬೆಂಗಳೂರಿನ ನೈಸ್ ರೋಡ್ ನಲ್ಲಿ ಸ್ನೇಹಿತನ ಮೂಲಕ ಹೇಳಿಸಿ ನಟಿ ಚೈತ್ರಳನ್ನು ಇದೀಗ ಅಪಹರಣ ಮಾಡಲಾಗಿದೆ.
ಪ್ರೀತಿಸಿ ನಟಿ ಚೈತ್ರ ಮತ್ತು ನಿರ್ಮಾಪಕ ಹರ್ಷವರ್ಧನ್ ಮದುವೆ ಆಗಿದ್ದರು. ಕೌಟುಂಬಿಕ ಕಲಹದಿಂದ ಬೇರೆ ಬೇರೆಯಾಗಿದ್ದಾರೆ. ಒಂದು ವರ್ಷದ ಮಗಳ ಜೊತೆಗೆ ನಟಿ ಚೈತ್ರ ಬೆಂಗಳೂರಿಗೆ ಬಂದಿದ್ದಾರೆ. ಚೈತ್ರಾಳನ್ನು ಅಪಹರಿಸಿ ತನ್ನ ಮಗಳನ್ನು ನೀಡುವಂತೆ ನಿರ್ಮಾಪಕ ರ್ಷವರ್ಧನ್ ಒತ್ತಾಯ ಮಾಡಿದ್ದಾನೆ. ಚೈತ್ರಳ ತಾಯಿಗೆ ಕರೆ ಮಾಡಿ ನನ್ನ ಮಗಳನ್ನು ತಂದು ಕೊಡಿ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಬೆದರಿಸಿದ್ದಾನೆ. ಈ ಸಂಬಂಧ ಚೈತ್ರ ಸಹೋದರಿ ದುರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.








