Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM

ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಬರಬೇಕು: ಸಂಸದ ಬಸವರಾಜ ಬೊಮ್ಮಾಯಿ

15/03/2026 7:47 PM

2026ರ ವಿಧಾನಸಭಾ ಚುನಾವಣೆ: ಮಾದರಿ ಚುನಾವಣಾ ನೀತಿ ಸಂಹಿತೆ ಅಂದ್ರೆ ಏನು? ಇಲ್ಲಿದೆ ಮಾಹಿತಿ

15/03/2026 7:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದಲ್ಲಿ 2 ಸಾವಿರ ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ಆರಂಭ : ಸಿಎಂ ಸಿದ್ದರಾಮಯ್ಯ
KARNATAKA

BREAKING : ರಾಜ್ಯದಲ್ಲಿ 2 ಸಾವಿರ ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ಆರಂಭ : ಸಿಎಂ ಸಿದ್ದರಾಮಯ್ಯ

By kannadanewsnow0522/02/2026 5:37 AM

ರಾಜ್ಯದ ಸರ್ಕಾರಿ ಕಾಲೇಜು ಇಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಖಾಲಿಯಿರುವ 2,000 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನ ಭರ್ತಿ ಮಾಡುವ ಪ್ರಕ್ರಿಯೆಯನ್ನ ಈಗಾಗಲೇ ಆರಂಭಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಳೆದ 2 ದಶಕಗಳಿಂದ ಕಾಲಕಾಲಕ್ಕೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ನೇಮಕಾತಿ ಸರಿಯಾಗಿ ಆಗದಿರುವುದರಿಂದ ಶಿಕ್ಷಕರ ಕೊರತೆ ಕಾಡುತ್ತಿದೆ. ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಶೇ. 60-70 ರಷ್ಟು ಶಿಕ್ಷಕರ ಹುದ್ದೆಗಳು ಖಾಲಿಯಿರುವುದು ಸರ್ಕಾರದ ಗಮನದಲ್ಲಿದೆ. ಈ ಹಿನ್ನೆಲೆಯಲ್ಲಿ ನಾವು ಸರ್ಕಾರಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಖಾಲಿಯಿರುವ 2,000 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನ ಭರ್ತಿ ಮಾಡುವ ಪ್ರಕ್ರಿಯೆಯನ್ನ ಈಗಾಗಲೇ ಆರಂಭಿಸಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳ ಒಟ್ಟು ದಾಖಲಾತಿ ಅನುಪಾತ [GER) ರಾಷ್ಟೀಯ ಸರಾಸರಿಗಿಂತ ಹೆಚ್ಚಾಗಿದೆ. ಇದು ಎಲ್ಲರನ್ನೂ ಒಳಗೊಂಡ ಸಾಮಾಜಿಕ ವ್ಯವಸ್ಥೆಯನ್ನು ಪಾಲಿಸುತ್ತಿರುವುದರ ನಿದರ್ಶನವಾಗಿದೆ. 2030 ರ ವೇಳೆಗೆ 50% ಒಟ್ಟು ದಾಖಲಾತಿ ಅನುಪಾತ [GER) ಸಾಧಿಸಬೇಕಾಗಿದೆ. ಅಲ್ಲದೇ ನಮ್ಮ ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಬಾಲಕಿಯರ ದಾಖಲಾತಿ ಬಾಲಕರಿಗಿಂತ ಹೆಚ್ಚಾಗಿದೆ. ರಾಜ್ಯದಲ್ಲಿ ಒಟ್ಟು ಉನ್ನತ ಶಿಕ್ಷಣ ದಾಖಲಾತಿಯಲ್ಲಿ ಹುಡುಗಿಯರು 51% ರಷ್ಟಿದ್ದಾರೆ ಹಾಗೂ ಸುಮಾರು 81% ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಬಂದವರಾಗಿದ್ದಾರೆ ಎಂದು ತಿಳಿಸಿದ್ರು.

ಶಿಕ್ಷಣದ ಮೂಲಕ ಮಹಿಳೆಯರನ್ನ ಸಬಲೀಕರಣಗೊಳಿಸುವುದು ಪ್ರಮುಖ ಆದ್ಯತೆಯಾಗಿದೆ. ದೀಪಿಕಾ ವಿದ್ಯಾರ್ಥಿ ವೇತನ ಯೋಜನೆ ಅಡಿಯಲ್ಲಿ, ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಸರ್ಕಾರಿ ಸಂಸ್ಥೆಗಳಲ್ಲಿ ಓದಿ ಯಾವುದೇ ಸಂಸ್ಥೆಯಲ್ಲಿ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ವರ್ಷಕ್ಕೆ 30,000 ರೂ. ಆರ್ಥಿಕ ಸಹಾಯವನ್ನು ಪಡೆಯುತ್ತಿದ್ದಾರೆ. ಯುನೈಟೆಡ್ ಕಿಂಗ್‌ಡಮ್‌ನ ಸಹಭಾಗಿತ್ವದಲ್ಲಿ ಚೆವೆನಿಂಗ್ ಕಾರ್ಯಕ್ರಮದ ಅಡಿಯಲ್ಲಿ, ಪ್ರತಿ ವರ್ಷ ಆಯ್ದ ಮಹಿಳಾ ಪದವೀಧರರಿಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ, ಒಂದು ವರ್ಷದ ಸ್ನಾತಕೋತ್ತರ ಅಧ್ಯಯನಕ್ಕಾಗಿ ಸಂಪೂರ್ಣ ವಿದ್ಯಾರ್ಥಿವೇತನದೊಂದಿಗೆ 3 ವರ್ಷಗಳ ಕಾಲ ಬೆಂಬಲ ನೀಡುತ್ತಿದ್ದೇವೆ. ಇದರಿಂದಾಗಿ ಅವರು ವಿಶ್ವದರ್ಜೆಯ ಶಿಕ್ಷಣ ಮತ್ತು ಜಾಗತಿಕ ಮಾನ್ಯತೆಯನ್ನ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಮ್ಮ ಸರ್ಕಾರವು ಭವಿಷ್ಯಕ್ಕೆ ಹೊಂದುವಂತಹ, ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯನ್ನ ನಿರ್ಮಿಸಲು ನಾವು ಸಿದ್ಧರಾಗಬೇಕಾಗಿದೆ. ಈ ದೃಷ್ಟಿಕೋನಕ್ಕೆ ಸ್ಪಷ್ಟ ನಿರ್ದೇಶನ ನೀಡುವ ಸಲುವಾಗಿ, ಆಯೋಗದ ಮಧ್ಯಂತರ ಶಿಫಾರಸುಗಳನ್ನ 2024-25 ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತಂದಿದ್ದೇವೆ. ಉಳಿದ ಶಿಫಾರಸ್ಸುಗಳನ್ನ ಕೂಡಲೇ ಅನುಷ್ಠಾನ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು.

Share. Facebook Twitter LinkedIn WhatsApp Email

Related Posts

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM2 Mins Read

ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಬರಬೇಕು: ಸಂಸದ ಬಸವರಾಜ ಬೊಮ್ಮಾಯಿ

15/03/2026 7:47 PM3 Mins Read

ಮದ್ದೂರಮ್ಮ ಜನರ ದುಃಖವನ್ನ ದೂರಮಾಡಲಿ, ಶಕ್ತಿ ನೀಡಲಿ: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಾರ್ಥನೆ

15/03/2026 7:01 PM1 Min Read
Recent News

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM

ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಬರಬೇಕು: ಸಂಸದ ಬಸವರಾಜ ಬೊಮ್ಮಾಯಿ

15/03/2026 7:47 PM

2026ರ ವಿಧಾನಸಭಾ ಚುನಾವಣೆ: ಮಾದರಿ ಚುನಾವಣಾ ನೀತಿ ಸಂಹಿತೆ ಅಂದ್ರೆ ಏನು? ಇಲ್ಲಿದೆ ಮಾಹಿತಿ

15/03/2026 7:30 PM

ಮದ್ದೂರಮ್ಮ ಜನರ ದುಃಖವನ್ನ ದೂರಮಾಡಲಿ, ಶಕ್ತಿ ನೀಡಲಿ: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಾರ್ಥನೆ

15/03/2026 7:01 PM
State News
KARNATAKA

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

By kannadanewsnow5715/03/2026 9:00 PM KARNATAKA 2 Mins Read

ಬೆಂಗಳೂರು: ಇಂದಿನ ಒತ್ತಡದ ಜೀವನಶೈಲಿ, ಬದಲಾದ ಆಹಾರ ಪದ್ಧತಿ ಮತ್ತು ಕೆಲಸದ ಹೈರಾಣಿನಿಂದಾಗಿ ಅನೇಕ ದಂಪತಿಗಳಲ್ಲಿ ಲೈಂಗಿಕ ಆಸಕ್ತಿ ಕುಂದುತ್ತಿದೆ.…

ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಬರಬೇಕು: ಸಂಸದ ಬಸವರಾಜ ಬೊಮ್ಮಾಯಿ

15/03/2026 7:47 PM

ಮದ್ದೂರಮ್ಮ ಜನರ ದುಃಖವನ್ನ ದೂರಮಾಡಲಿ, ಶಕ್ತಿ ನೀಡಲಿ: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಾರ್ಥನೆ

15/03/2026 7:01 PM

ಕೋಲಾರದ ಹೋಟೆಲ್‌ಗಳ ಮೇಲೆ ತಹಸೀಲ್ದಾರ್ ದಾಳಿ: ಅಕ್ರಮವಾಗಿ ಬಳಸುತ್ತಿದ್ದ 21 ಗೃಹಬಳಕೆ ಸಿಲಿಂಡರ್‌ಗಳ ಜಪ್ತಿ!

15/03/2026 6:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.