ಶಿವಮೊಗ್ಗ : ನಿನ್ನೆ ಇಡೀ ರಾಜ್ಯಾಧ್ಯಂತ ರಂಜಾನ್ ಹಬ್ಬ ಆಚರಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ರಾಜ್ಯದ ಈ ಜಿಲ್ಲೆಗಳಲ್ಲಿ ರಂಜಾನ್ ಪ್ರಾರ್ಥನೆ ವೇಳೆ, ಪ್ಯಾಲಿಸ್ತಾನಿ ಪರವಾಗಿ ಘೋಷಣೆ ಕೂಗಿರಿವ ಘಟನೇ ವರದಿಯಾಗಿದೆ.ಹೌದು ಶಿವಮೊಗ್ಗ, ಕೊಪ್ಪಳ ಜಿಲ್ಲೆಗಳಲ್ಲಿ ರಂಜಾನ್ ಪ್ರಾರ್ಥನೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆ ಸಾಗರದ ಈದ್ಗಾ ಮೈದಾನದಲ್ಲಿ ನಮಾಜ್ ಬಳಿಕ ಎಸ್ಡಿಪಿಐ ‘ಪ್ಯಾಲೆಸ್ತೀನ್ ಫ್ರೀ’ ನಾಮಫಲಕ ಪ್ರದರ್ಶನ ಮಾಡಿತು. ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರು ಸಾಗರದ ಕೆಳದಿ ರಸ್ತೆಯ ಈದ್ಗಾ ಮೈದಾನದಲ್ಲಿ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಬಳಿಕ ಎಸ್ಡಿಪಿಐ ಸಂಘಟನೆ ಕಾರ್ಯಕರ್ತರು ‘ಪ್ಯಾಲೆಸ್ತೀನ್ ಫ್ರೀ’, ಪ್ಯಾಲೆಸ್ತೀನ್, ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ ನಿಲ್ಲಿಸುವಂತೆ ಫಲಕ ಪ್ರದರ್ಶಿಸಿದರು.
ಇದೆ ರೀತಿ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲೂ ನಡೆಯಿತು.ಗಂಗಾವತಿಯಲ್ಲಿ ಬೆಳಗ್ಗೆ ಪ್ರಾರ್ಥನೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಲಾಯಿತು. ಪ್ಯಾಲೆಸ್ತೀನ್ ಪರ ಮತ್ತು ವಕ್ಫ್ ತಿದ್ದುಪಡಿ ಬಿಲ್ ವಿರುದ್ಧ ಘೋಷಣೆಗಳನ್ನು ಕಿಡಿಗೇಡಿಗಳು ಹಾಕಿದರು. ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ್ದ ಆರು ಮಂದಿ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದರು.