ಹಾವೇರಿ : ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದನ್ನು ಕೇಳಿದ್ದೇವೆ. ಆದರೆ ವಿದ್ಯೆ ಕಲಿಸುವ ಗುರು ಒಬ್ಬ ವಿದ್ಯಾರ್ಥಿಯ ಶಾಲಾ ಪ್ರವೇಶಕ್ಕೆ 10 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬೆಲೆಗೆ ಬಿದ್ದಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಹೌದು ಹಾವೇರಿ ಜಿಲ್ಲೆಯ ಸವಣೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಯೊಬ್ಬರಿಗೆ ಪ್ರವೇಶ ನೀಡಲು 10 ಸಾವಿರ ರೂ. ಲಂಚ ಪಡೆದ ಆರೋಪದ ಮೇಲೆ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿ ಎಂಬ ಮುಖ್ಯ ಶಿಕ್ಷಕನನ್ನು ಆತನ ಮನೆಯಲ್ಲೇ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಪುತ್ರನ ಶಾಲಾ ಪ್ರವೇಶಕ್ಕೆ 50 ರೂ. ಸಾವಿರ ಲಂಚ ನೀಡುವಂತೆ ಸವಣೂರಿನ ಖಾದರಭಾಗ ಓಣಿಯ ನಿವಾಸಿ ಅಕ್ಬರ್ ಅವರಿಗೆ ಆರೋಪಿ ಮಂಜುನಾಥ ಬೇಡಿಕೆ ಇಟ್ಟಿದ್ದ.
ಹಣ ಇಲ್ಲವೆಂದಾಗ, 10 ರೂ. ಸಾವಿರ ಕೊಡುವಂತೆ ಒತ್ತಾಯಿಸಿದ್ದ. ಮನೆಗೆ ಕರೆಸಿಕೊಂಡು 5 ಸಾವಿರ ರೂ. ಮುಂಗಡವಾಗಿ ಪಡೆದಿದ್ದ. ಈ ಬಗ್ಗೆ ಅಕ್ಬರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದ. ಇಂದು ಲೋಕಾಯುಕ್ತ ಪೊಲೀಸ್ ಹೆಸರು ಮುಖ್ಯ ಶಿಕ್ಷಕ ಮಂಜುನಾಥ್ ಮನೆಗೆ ಏಕಾಏಕಿ ದಾಳಿ ಮಾಡಿ 5 ಸಾವಿರ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಹಿಡಿದು ಅರೆಸ್ಟ್ ಮಾಡಿದ್ದಾರೆ.