ಕೋಲ್ಕತ್ತಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಹರಿಯುವ ಪವಿತ್ರ ಹುಗ್ಲಿ ನದಿಯಲ್ಲಿ ಬೋಟ್ ಸಂಚಾರ ಮಾಡಿದರು. ಈ ಸಂದರ್ಭದಲ್ಲಿ ಅವರು ನದಿಯ ಸೊಬಗನ್ನು ಸವಿಯುವುದರ ಜೊತೆಗೆ ಫೋಟೋಗ್ರಫಿಯಲ್ಲೂ ಕೈಚಳಕ ತೋರಿಸಿದ್ದಾರೆ.
ನೌಕಾಯಾನದ ಸುಂದರ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಮೋದಿ ಅವರು, ಗಂಗಾ ನದಿಯೊಂದಿಗಿನ ಬಂಗಾಳಿ ಜನರ ಭಾವನಾತ್ಮಕ ಸಂಬಂಧವನ್ನು ಕೊಂಡಾಡಿದ್ದಾರೆ.
ಬೋಟ್ ಸಂಚಾರದ ವೇಳೆ ವೇಳೆ ಪ್ರಧಾನಿಯವರು ಸ್ವತಃ ಕ್ಯಾಮೆರಾ ಹಿಡಿದು ಫೋಟೋಗಳನ್ನು ಕ್ಲಿಕ್ಕಿಸಿದರು. ಪ್ರಸಿದ್ಧ ವಿದ್ಯಾಸಾಗರ್ ಸೇತು ಮತ್ತು ಹೌರಾ ಬ್ರಿಡ್ಜ್‌ಗಳ ಭವ್ಯತೆಯನ್ನು ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಫೋಟೋಗಳ ಜೊತೆಗೆ ಮೋದಿ ಅವರು ಹೀಗೆ ಬರೆದುಕೊಂಡಿದ್ದಾರೆ — “ಹುಗ್ಲಿ ನದಿಯ ಕೆಲವು ಸುಂದರ ದೃಶ್ಯಗಳು ಇಲ್ಲಿವೆ. ಈ ಮಹಾನ್ ನದಿಯಲ್ಲಿ ಸಾಗುವಾಗ ನಾನು ಫೋಟೋಗ್ರಫಿಯಲ್ಲೂ ಕೈಯಾಡಿಸಿದೆ. ಪ್ರತಿಯೊಬ್ಬ ಬಂಗಾಳಿಯ ಮನಸ್ಸಿನಲ್ಲಿ ಗಂಗಾ ನದಿಗೆ ವಿಶೇಷ ಸ್ಥಾನವಿದೆ. ಗಂಗೆಯು ಬಂಗಾಳದ ಆತ್ಮದಲ್ಲಿ ಹರಿಯುತ್ತಾಳೆ ಎಂದು ಹೇಳಬಹುದು. ಈ ಪವಿತ್ರ ನೀರು ತನ್ನೊಂದಿಗೆ ಒಂದು ಇಡೀ ನಾಗರಿಕತೆಯನ್ನೇ ಹೊತ್ತು ಸಾಗುತ್ತದೆ.”
ಪ್ರಧಾನಿಯವರು ಹಂಚಿಕೊಂಡಿರುವ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೋದಿ ಅವರ ಫೋಟೋಗ್ರಫಿ ಕೌಶಲಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
For every Bengali, the Ganga occupies a very special place. One can say that the Ganga flows through the soul of Bengal. Her divine waters carry the timeless spirit of an entire civilisation.
This morning in Kolkata, I spent some time on the banks of the Hooghly river, an… pic.twitter.com/I3Y0gsFl3E
— Narendra Modi (@narendramodi) April 24, 2026
Some more glimpses from the banks of the Hooghly.
Tried my hand at photographing this great river. Also caught a close glimpse of the Vidyasagar Setu and Howrah Bridge. pic.twitter.com/S6Nq6r2xOc
— Narendra Modi (@narendramodi) April 24, 2026
Some more glimpses from Kolkata. Indeed a very special morning at the Hooghly river. pic.twitter.com/D8Wwzy3KsX
— Narendra Modi (@narendramodi) April 24, 2026








