ಹಾಸನ : ವರ್ಷಕ್ಕೊಮೆ ದರ್ಶನ ಭಾಗ್ಯ ನೀಡುವ ನಗರದ ಅಧಿದೇವತೆ ಹಾಸನಾಂಬ ದೇವಿಯ ಈ ವರ್ಷದ ದರ್ಶನಕ್ಕೆ ಇಂದು ವಿಶ್ವರೂಪ ದರ್ಶನದ ಬಳಿಕ ಶಾಸೊತ್ರೕಕ್ತವಾಗಿ ಪೂಜೆ ಸಲ್ಲಿಸಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು. ಶಾಸಕ ಸ್ವರೂಪ್‌ಪ್ರಕಾಶ್ . ಜಿಲ್ಲಾಧಿಕಾರಿ ಸತ್ಯಭಾಮ, ಎಸ್,ಪಿ ಮಹಮದ್ ಸುಜೆತಾ , ಉಪವಿಭಾಗಾಧಿಕಾರಿ ಮಾರುತಿ ಸೇರಿದಂತೆ ಮತ್ತಿತರ ಗಣ್ಯರ ಸಮುಖದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು.
ಇದೀಗ ಇಂದು ಹಾಸನಾಂಬೆ ದೇಗುಲದ ಗರ್ಭಗುಡಿ ಬಂದ್ ಮಾಡಲಾಗಿದೆ. ಅಕ್ಟೋಬರ್ 24 ಗುರುವಾರ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಅಕ್ಟೋಬರ್ 25 ರಿಂದ ನವೆಂಬರ್ 03 ನಸುಕಿನ ಜಾವ 6 ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಒಂಬತ್ತು ದಿನಗಳಲ್ಲಿ ದಾಖಲೆಯ 20 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದರು. ಮತ್ತು ಹಾಸನಾಂಬ ದೇಗುಲಕ್ಕೆ 9 ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದು ಬಂದಿದೆ.
ದೀಪವಾವಳಿ ಹಬ್ಬ ಇದ್ದರೂ ಕೂಡ ನಾಡಿನ ಮೂಲೆ ಮೂಲೆಯಿಂದ ಬಂದಿದ್ದ ಭಕ್ತರು ಸರತಿ ಸಾಲುಗಳಲ್ಲಿ ನಿಂತು ಶ್ರದ್ದಾ ಭಕ್ತಿಯಿಂದ ಬಂದು ದೇವಿಯ ಆಶೀರ್ವಾದ ಪಡೆದುಕೊಂಡರು. ಈ ಬಾರಿ ಹಿಂದೆಂದೂ ಕಂಡು ಕೇಳರಿಯದ ಸಂಖ್ಯೆಯಲ್ಲಿ ಭಕ್ತರು ಶಕ್ತಿ ದೇವತೆಯನ್ನು ಕಣ್ತುಂಬಿಕೊಂಡರು. ದೇವಿಯ ಗರ್ಭಗುಡಿಯೊಳಗಿನ ಆರದ ದೀಪವನ್ನು ನೋಡಿ ಪುನೀತರಾದರು.
ಇದೀಗ ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ, ಶಾಸಕರಾದ ಸ್ವರೂಪ್, ಜಿಲ್ಲಾಧಿಕಾರಿ ಸತ್ಯಭಾಮ ಸಿರಿಗಂತೆ ಹಲವು ಅಧಿಕಾರಿಗಳ ಸಮ್ಮುಖದಲ್ಲಿ ಅರ್ಚಕರು ದೇಗುಲದ ಗರ್ಭಗುಡಿ ಬಾಗಿಲನ್ನು ಬಂದ್ ಮಾಡಿದರು. ಇನ್ನು ಮುಂದಿನ ವರ್ಷವೇ ಹಾಸನದ ದೇಗುಲದ ಗರ್ಭಗುಡಿ ತೆರೆಯಲಾಗುತ್ತದೆ. ಅಲ್ಲಿಯವರೆಗೂ ದೇವಿಯ ಮೂರ್ತಿಯ ಮೇಲೆ ಇರುವ ಹೂವುಗಳು ಬಾಡದೆ ಹಾಗೆ ಇರಲಿದ್ದು, ಹಚ್ಚಿದ್ದ ದೀಪ ಕೂಡ ಒಂದು ವರ್ಷದವರೆಗೆ ಉರಿಯುವುದು ಈ ಒಂದು ದೇವಿಯ ಪವಾಡ ಎಂದೇ ಹೇಳಲಾಗುತ್ತಿದೆ.