ಬೆಳಗಾವಿ : ಜನವರಿ 21ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದ್ದು, ಈ ಒಂದು ಸಮಾವೇಶದ ಸಿದ್ಧತೆಯನ್ನು ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಪರಿಶೀಲನೆ ನಡೆಸಿದ್ದು ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಟೆಂಪಲ್ ರನ್ ಮಾಡಿದ್ದು ಸಮಾವೇಶ ಯಾವುದೇ ತೊಂದರೆ ಇಲ್ಲದೆ ಅತ್ಯಂತ ಸರಳವಾಗಿ ನಡೆಯಲಿ ಎಂದು ದೇವರ ಮೂರೆ ಹೋಗಿದ್ದಾರೆ.
ಹೌದು ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿರುವ ಕಪಿಲೇಶ್ವರ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದ್ದರು. ಈ ವೇಳೆ ತಮ್ಮ ಅಂಗಿ ಬಿಚ್ಚಿ ಸಮಾವೇಶ ಸರಳವಾಗಿ ಯಾವುದೇ ಸಮಸ್ಯೆ ಆಗದೆ, ನಡೆಯಲಿ ಮತ್ತು ಯಶಸ್ವಿಯಾಗಲಿ ಎಂದು ದೇವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಿದರು.
ಪೂಜೆ ಮುಗಿದ ಬಳಿಕ ಕಪಲೇಶ್ವರ ದೇವಸ್ಥಾನದ ಅರ್ಚಕ ಮಂಜುನಾಥ್ ಅವರು ಮುಂದಿನ ಬಾರಿ ಡಿಕೆ ಶಿವಕುಮಾರ್ ಅವರು ಸಿಎಂ ಆಗಲಿ ಎಂದು ಅವರಿಗೆ ತ್ರಿಶೂಲ ನೀಡಿ ಆಶೀರ್ವದಿಸಿದರು. ಇವಳೇ ಡಿಸೆಂಬ್ ಡಿಕೆ ಶಿವಕುಮಾರ್ ಅರ್ಚಕರಿಂದ ಸನ್ಮಾನ ಸ್ವೀಕರಿಸಿ ಆಶೀರ್ವಾದ ಪಡೆದರು.