ಚಿಕ್ಕಬಳ್ಳಾಪುರ : ಪ್ರಿಯಕರನ ಜೊತೆಗೆ ಇದ್ದಾಗಲೇ ವಿವಾಹಿತ ಪ್ರಿಯತಮೆಯು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಗುಂತಪನಹಳ್ಳಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.ಚಿಕ್ಕಬಳ್ಳಾಪುರದ ಬಾಪೂಜಿ ನಗರದ ನಿವಾಸಿ ಅನುಷಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಪ್ರಿಯತಮೆಯನ್ನು ಪ್ರಿಯಕರನೆ ಕೊಂದಿದ್ದಾನೆ ಎಂದು ಶಂಕಿಸಿ ಇದೀಗ ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಗುಂತಪ್ಪನಹಳ್ಳಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಮಹಿಳೆಯ ಶವ ಪತ್ತೆಯಾಗಿದೆ. ಚಿಕ್ಕಬಳ್ಳಾಪುರದ ಬಾಪೂಜಿನಗರ ನಿವಾಸಿ ಅನುಷಾ ಅನುಮಾನಾಸ್ಪದ ಸಾವಾಗಿದೆ ವಿವಾಹಿತ ಪ್ರಿಯತಮೆ ಅನುಷಾ ಕೊಲ್ಲಲು ಪ್ರಿಯಕರ ಪವನ್ ಕಸರತ್ತು ನಡೆಸಿದ್ದ ಎನ್ನಲಾಗಿದೆ. ಗರ್ಭಿಣಿ ಅನುಷಾಗೆ ಮೊದಲು ಪವನ್ ವಿಷ ಕುಡಿಸಿ ಕೊಲ್ಲಲು ಯತ್ನಿಸಿದ್ದಾನೆ.
ವಿಷ ಕುಡಿದರು ಬದುಕಿದ್ದ ಅನುಷಾ ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಹೊಂಗೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಅನುಷಾ ಶವ ಪತ್ತೆಯಾಗಿದೆ. ಗುಂತಪ್ಪನಹಳ್ಳಿಯ ಪವನ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ಘಟನೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.