ವಿಜಯನಗರ : ವೇಶ್ಯಾವಾಟಿಕೆ ಅಡ್ಡಿ ಮೇಲೆ ಪೊಲೀಸರ ಹಾಗೂ ಒಡನಾಡಿ ಸಂಸ್ಥೆ ಜಂಟಿಯಾಗಿ ದಾಳಿ ಮಾಡಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆಯ ರಾಣಿ ಪೇಟೆಯಲ್ಲಿನ ವೆಂಕಟೇಶ್ವರ ಲಾಡ್ಜ್ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ದಾಳಿ ವೇಳೆ ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಿದ್ದು, 10 ಪುರುಷರನ್ನು ವಶಕ್ಕೆ ಪಡೆಯಲಾಗಿದೆ.ಕೊಲ್ಕತ್ತಾದ ಇಬ್ಬರು ಹಾಗೂ ರಾಜ್ಯದ ಇಬ್ಬರು ಮಹಿಳೆಯರನ್ನು ಈ ವೇಳೆ ರಕ್ಷಣೆ ಮಾಡಲಾಗಿದೆ. ವಿಜಯನಗರದ 2 ಕೊಲ್ಕತ್ತಾ ಮೂಲದ 2 ಮಹಿಳೆಯರ ರಕ್ಷಣೆ ಮಾಡಲಾಗಿದ್ದು, 10 ಪುರುಷರನ್ನು ಇದೆ ವೇಳೆ ವಶಕ್ಕೆ ಪಡೆಯಲಾಗಿದೆ.
ಲಾಡ್ಜ್ ವ್ಯವಸ್ಥೆ ನೋಡಿ ಶಾಕ್ ಅದ ಪೊಲೀಸರು
ಲಾಡ್ಜ್ ಅಲ್ಲಿನ ವ್ಯವಸ್ಥೆ ನೋಡಿ ಇದೆ ವೇಳೆ ಪೊಲೀಸರು ಬೆಚ್ಚಿ ಬಿದ್ದಿದ್ದು ವೆಂಕಟೇಶ್ವರ ಲಾಡ್ಜ್ ನಾ ಮೂರನೇ ಮಹಡಿಯಲ್ಲಿ ಮಾಂಸ ದಂಧೆ ಕೂಡ ನಡೆಸುತ್ತಿದ್ದರು ಎನ್ನಲಾಗಿದೆ. ಯಾರಾದರೂ ಬಂದರೆ ಕ್ಯಾಷಿಯರ್ ತಕ್ಷಣ ಬೆಲ್ ಮಾಡುತ್ತಿದ್ದ ಬೆಲ್ ಮಾಡಿದಾಗ ಗಾಯತ್ರಿ ಮಂತ್ರ ಪ್ಲೇ ಆಗುತ್ತಿತ್ತು. ಗಾಯತ್ರಿ ಮಂತ್ರ ಕೇಳಿಸಿಕೊಂಡ ಅನಾತಿಗಳು ಇದೇ ವೇಳೆ ಪರಾರಿ ಆಗುತ್ತಿದ್ದರು ಎನ್ನಲಾಗುತ್ತಿದೆ.
ತಕ್ಷಣ ಲಾಡ್ಜ ಪುಟ್ಟ ಕೋಣೆಯಲ್ಲಿ ಮಹಿಳೆಯರು ಬಚ್ಚಿಟ್ಟುಕೊಳ್ಳುತ್ತಿದ್ದರು. ಹೊಸಪೇಟೆ ಟೌನ್ ಠಾಣೆ ಪೊಲೀಸರಿಂದ ಪ್ರಕರಣದ ತನಿಖೆ ಚುರುಕು ಗೊಳಿಸಿದ್ದಾರೆ.
ಲಾಡ್ಜ್ ನ.ಪುಟ್ಟ ಕೋಣೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದ ಮಹಿಳೆಯರು ಹೊಸಪೇಟೆ ಟೌನ್ ಠಾಣೆ ಪೋಲಿಸರಿಂದ ಪ್ರಕರಣದ ತನಿಖೆ ನಡೆಸಿದಾಗ ಘಟನೆ ಬಳಕೆಗೆ ಬಂದಿದೆ