ಬೆಂಗಳೂರು : ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ರೌಡಿಶೀಟರ್ ಗಾಳಿಗೆ ಪೊಲೀಸರು ಶಾಕ್ ನೀಡಿದ್ದಾರೆ ಬೆಳಬೆಳಗ್ಗೆ ರೌಡಿಶೀಟರ್ ಗಳ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೌದು ರೌಡಿ ಶೀಟರ್ ಮನೆ ಮೇಲೆ ಪೋಲಿಸರು ದಾಳಿ ನಡೆಸಿದ್ದಾರೆ. ವಾಯುವ್ಯ ವಿಭಾಗದ ಡಡಿಸಿಪಿ ಡಿಎಲ್ ನಾಗೇಶ್ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ. ಬ್ಯಾಡರಹಳ್ಳಿ, ಪೀಣ್ಯ ಸೋಲದೇವನಹಳ್ಳಿ, ರಾಜಗೋಪಾಲನಗರ ಠಾಣೆ ಬಾಗಲಕುಂಟೆ ಪೊಲೀಸರಿಂದ ರೌಡಿಶೀಟರ್ ಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.