ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದಲ್ಲಿ ಏಪ್ರಿಲ್ 22 ರಂದು ಪ್ರವಾಸಿಗರ ಮೇಲೆ ಉಗ್ರರು ಭೀಕರ ದಾಳಿ ನಡೆಸಿದರು. ಈ ಒಂದು ದಾಳಿಯಲ್ಲಿ 26 ಜನ ಅಮಾಯಕರು ಬಲಿಯಾಗಿದ್ದಾರೆ. ಅದರಲ್ಲಿ ಇಬ್ಬರು ಕನ್ನಡಿಗರು ಸಹ ಸಾವನ್ನಪ್ಪಿದ್ದರೆ. ಇದೀಗ ಉಗ್ರರಿಗೆ ನೆರವು ನೀಡುತ್ತಿದ್ದ 64 ಆರೋಪಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಹೌದು ಗುಂಡಿನ ದಾಳಿ ನಡೆದ ಬಳಿಕ ಕಾಶ್ಮೀರದಲ್ಲಿ ಹೈ ಅಲರ್ಟ್ ಇದ್ದು, ಈಗಾಗಲೇ ಭಾರತೀಯ ಸೈನಿಕರು, ಕಾಶ್ಮೀರಿ ಪೊಲೀಸರು ಉಗ್ರರ ಮಟ್ಟ ಹಾಕಲು ಯೋಜನೆ ರೂಪಿಸಿದ್ದಾರೆ. ಇದೀಗ ಉಗ್ರರಿಗೆ ನೆರವು ನೀಡ್ತಿದ್ದ ಕಾಶ್ಮೀರದ 64 ಆರೋಪಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.ಕಾಶ್ಮೀರದ ಕಣಿವೆಯ್ಯಾದ್ಯಂತ ಪೊಲೀಸರಿಂದ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.