ತುಮಕೂರು : ಜಮೀನು ಒತ್ತುವರಿ ತೆರವಿಗಾಗಿ ಆಗಮಿಸಿದ್ದ ವೇಳೆ ಪೊಲೀಸರು ಹಾಗೂ ವಕೀಲರ ನಡುವೆ ಗಲಾಟೆ ನಡೆದಿದ್ದು ಗಲಾಟೆ ವಿಕೋಪಕ್ಕೆ ತಿರುಗಿ ವಕೀಲರ ಮೇಲೆ ಪೊಲೀಸ್ ಅಧಿಕಾರಿ ಒಬ್ಬರು ಹಲ್ಲೆ ನಡೆಸಿರುವ ಘಟನೆ ತುಮಕೂರು ತಾಲೂಕಿನ ಹೊನ್ನೇನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಇದೀಗ ವಕೀಲರ ಮೇಲೆ ಹಲ್ಲಿ ಖಂಡಿಸಿ ತುಮಕೂರು ಜಿಲ್ಲೆಯಲ್ಲಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ.
ಹೌದು ತುಮಕೂರು ತಾಲೂಕಿನ ಹೊನ್ನೇನಹಳ್ಳಿ ಬಳಿ ಈ ಒಂದು ಗಲಾಟೆ ನಡೆದಿದೆ. ಒತ್ತುವರಿ ತೆರವಿಗೆ ಬಂದಿದ್ದ ರೈಲ್ವೆ ಇಲಾಖೆ ಸಿಬ್ಬಂದಿ, ವಕೀಲ ರವಿ ಅನ್ನುವವರ ಜಮೀನು ಒತ್ತುವರಿ ತೆರವಿಗೆ ಬಂದಿದ್ದರು. ನೋಟಿಸ್ ಹಾಗೂ ಪರಿಹಾರ ನೀಡದೆ ಒತ್ತುವರಿ ತೆರವಿಗೆ ಬಂದಿದ್ದರು.
ಈ ವೇಳೆ ಜಮೀನು ಒತ್ತುವರಿ ತೆರವಿಗೆ ವಕೀಲ ರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ತುಮಕೂರು ಸಿಪಿಐ ದಿನೇಶ್ ಹಾಗೂ ವಕೀಲ ರವಿ ನಡುವೆ ಮಾತಿನ ಚಕಮಕಿ ಹಾಗೂ ನೂಕಾಟ, ತಳ್ಳಾಟ ನಡೆದಿದೆ. ಈ ಗಲಾಟೆ ನಡುವೆ ವಕೀಲ ರವಿಯ ಮೇಲೆ ಸಿಪಿಐ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.