ಕಲಬುರ್ಗಿ : ಕಲ್ಬುರ್ಗಿಯಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದ್ದು, ಅಕ್ರಮವಾಗಿ ಡ್ರಗ್ಸ್ ಪೂರೈಸುತ್ತಿದ್ದ ಆರೋಪಿಯ ಮೇಲೆ ಫೈರಿಂಗ್ ನಡೆಸಲಾಗಿದೆ. ಕಲ್ಬುರ್ಗಿ ಹೊರವಲಯದ ತಾವರಗೇರಾ ಬಳಿ ಗುಂಡಿನ ದಾಳಿ ನಡೆಸಲಾಗಿದೆ. ಡ್ರಗ್ಸ್ ಸಾಗಿಸುತ್ತಿದ್ದ ಸುಪ್ರೀತ್ ನವಲೆ ಎಡಗಾಲಿಗೆ ಗುಂಡೇಟು ತಗುಲಿದೆ.
ಈತ ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಕುರಿತು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಕಾರಿನ ತಪಾಸಣೆ ಮಾಡುವಾಗ ಪೊಲೀಸರ ಮೇಲೆ ಸುಪ್ರೀತ್ ನವಲೆ ದಾಳಿ ಮಾಡಿದ್ದಾನೆ. ಚಾಕುನಿಂದ ಇರಿದು ಸುಪ್ರೀತ್ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ.
ಹೆಡ್ ಕಾನ್ಸ್ಟೇಬಲ್ ಗುರುಮೂರ್ತಿ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ.ಈ ವೇಳೆ ಚೌಕ್ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಅವರಿಂದ ಫೈರಿಂಗ್ ಆಗಿದೆ. ಸದ್ಯ ಆರೋಪಿ ಸುಪ್ರೀತ್ ಗೆ ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯ ಟ್ರಾಮ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.