ಬೆಂಗಳೂರು : ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆಯನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಅಖಂಡ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಇನ್ನು ಬೆಂಗಳೂರಿನಲ್ಲಿ ಮೆಟ್ರೋ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆಯಿತು.
ಮೆಟ್ರೋ ಮುತ್ತಿಗೆಗೆ ಯತ್ನಿಸಿದ ಕಾರ್ಯಕರ್ತರಿಗೆ ತಡೆ ನೀಡಲಾಯಿತು. ರಾಜಾಜಿನಗರ ಮತ್ತು ಬಸವೇಶ್ವರ ನಗರದಲ್ಲಿ ಮೆಟ್ರೋ ಮುತ್ತಿಗೆ ಹಾಕಾಲು ಸಂಘಟನೆ ಯತ್ನಿಸಿತ್ತು. ಈ ವೇಳೆ ಪೊಲೀಸರು ಅವರನ್ನು ತಡೆದರು. ಪೋಲೀಸರ ತಡೆಗೆ ಹೋರಾಟಗಾರರು ರೋಷಾವೇಶ ತಾಳಿದ್ದಾರೆ. ಈ ವೇಳೆ ಹೋರಾಟಗಾರರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ ತಕ್ಷಣ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಚಿಕ್ಕಮಂಗಳೂರಿನಲ್ಲಿ ಕರ್ನಾಟಕ ಬಂದ್ ಗೆ ಕೆಎಸ್ಆರ್ಟಿಸಿ ನೌಕರರು ಬೆಂಬಲ ನೀಡದ ಹಿನ್ನೆಲೆಯಲ್ಲಿ ಚಾಲಕರನ್ನು ಹೋರಾಟಗಾರರು ಶಾಲು ಹೊಂದಿಸಿ ಸನ್ಮಾನಿಸಿದ ಘಟನೆ ನಡೆಯಿತು. ಕರ್ನಾಟಕ ಬಂದ್ ಗೆ ಕೆಎಸ್ಆರ್ಟಿಸಿ ನೌಕರರು ಬೆಂಬಲ ನೀಡದ ಹಿನ್ನೆಲೆ ಬಸ್ ನಿಲ್ಲಿಸಿ ಚಾಲಕರಿಗೆ ಹೋರಾಟಗಾರರು ಸನ್ಮಾನ ಮಾಡಿರುವ ಘಟನೆ ನಡೆಯಿತು. ನಿಮಗೆ ಧನ್ಯವಾದ ಎಂದು ಶಾಲು ಹೊದಿಸಿ ಕೆಎಸ್ಆರ್ಟಿಸಿ ಚಾಲಕರಿಗೆ ಸನ್ಮಾನಿಸಿದರು. ಚಿಕ್ಕಮಂಗಳೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಈ ಒಂದು ಘಟನೆ ನಡೆಯಿತು.