ಬೆಳಗಾವಿ : ಕಳೆದ ಡಿಸೆಂಬರ್ 20ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕುಡ ಗ್ರಾಮದಲ್ಲಿ ಗರ್ಭಿಣಿ ಸುವರ್ಣ (33) ಎನ್ನುವ ಮಹಿಳೆಯ ಹತ್ಯೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಅಪ್ಪಯ್ಯ ರಾಚಯ್ಯ ಮಠಪತಿಯನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ.
ಕೇವಲ 50 ಸಾವಿರ ಹಣಕ್ಕಾಗಿ ಆರೋಪಿ ಅಪ್ಪಯ್ಯ ಗರ್ಭಿಣಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಡಿಸೆಂಬರ್ 20ರಂದು ಅಥಣಿ ತಾಲೂಕಿನ ಚಿಕ್ಕೋಡು ಗ್ರಾಮದಲ್ಲಿ ಈ ಒಂದು ಕೊಲೆ ನಡೆದಿತ್ತು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೋಡು ಗ್ರಾಮ ಸುವರ್ಣಳನ್ನು ಭಾವ ಅಪ್ಪಯ್ಯ ಭೀಕರವಾಗಿ ಕೊಂದು ಪರಾರಿಯಾಗಿದ್ದ.
ಬಾಗಲಕೋಟೆ ಜಿಲ್ಲೆಯ ತೆರದಾಳದಿಂದ ಬಂದು ಕೊಲೆ ಮಾಡಿ ಆತಪರಾರಿಯಾಗಿದ್ದ ಇದೀಗ ಪೊಲೀಸರು ಮಹಾರಾಷ್ಟ್ರದ ಮೀರಜ್ ನಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ 50,000 ಸಾಲವನ್ನು ಕೊಟ್ಟು ಸುವರ್ಣ ಕೊಟ್ಟಿದ್ದಳು. ಪದೇಪದೇ ಹಣ ಕೇಳಿದ್ದಕ್ಕೆ ಅಪ್ಪಯ್ಯ ಕೊಲೆಯ ನಿರ್ಧಾರಕ್ಕೆ ಬಂದಿದ್ದಾನೆ. ಕೊಂದರೆ ಐವತ್ತು ಸಾವಿರ ಉಳಿಯುತ್ತೆ, ಮೈ ಮೇಲಿನ ಚಿನ್ನ ಸಿಗುತ್ತದೆ ಎಂದು ಸಂಚು ರೂಪಿಸಿದ್ದಾನೆ.
ಬಳಿಕ ಚಿಕ್ಕೊಡು ಗ್ರಾಮಕ್ಕೆ ಬಂದು ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಗರ್ಭಿಣಿ ಸುವರ್ಣಳನ್ನು ಕೊಚ್ಚಿ ಕೊಲೆ ಮಾಡಿ ಆರೋಪಿ ಅಪ್ಪಯ್ಯ ಪರಾರಿಯಾಗಿದ್ದಾನೆ. ಕೊಲೆಯಾದ ಬಳಿಕ ಅಂತ್ಯಸಂಸ್ಕಾರಕ್ಕೆ ಬರದೆ ಅಪ್ಪಯ್ಯ ದೂರ ಉಳಿದಿದ್ದ. ಇದೆ ವೇಳೆ ಸುವರ್ಣ ಅಕ್ಕ ಕೂಡ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಸಂಶಯಗೊಂಡು ಪೊಲೀಸರು ಆರೋಪಿ ಅಪ್ಪಯ್ಯನ ಬೆನ್ನು ಬಿದ್ದಿದ್ದರು.ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.