ಶ್ರೀನಗರ : ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26 ಜನರು ಬಲಿಯಾಗಿದ್ದಾರೆ. ಈಗಾಗಲೇ ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ಚುರುಕುಗೊಳಿಸಿಇದೆ. ಮತ್ತೊಂದೆಡೆ ಜಮ್ಮು-ಕಾಶ್ಮೀರ ಪೊಲೀಸರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನಿ ಪ್ರಜೆಗಳು ಮತ್ತು ಎಲ್‌ಇಟಿ ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್, ಅಲಿ ಭಾಯ್ ಮತ್ತು ಹಾಶಿಮ್ ಮೂಸಾ ಅವರ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಅನಂತನಾಗ್ ಪೊಲೀಸರು ಘೋಷಿಸಿದ್ದಾರೆ.
ಯಾವುದೇ ಸಂಬಂಧಿತ ಮಾಹಿತಿಗಳಿದ್ದಲ್ಲಿ ಅನಂತ್ ನಾಗ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಪೊಲೀಸ್ ನಿಯಂತ್ರಣ ಕೊಠಡಿ ಅವರನ್ನು ನೇರವಾಗಿ ಈ ಕೆಳಗಿನ ಸಂಪರ್ಕ ಸಂಖ್ಯೆ ಸಂಪರ್ಕಿಸಬಹುದು ಎಂದು ಮನವಿ ಮಾಡಿದ್ದಾರೆ. ಎಸ್ ಪಿ ಅನಂತ್ ನಾಗ್: 9596777666, ಪಿಸಿಆರ್ ಅನಂತ್ ನಾಗ್ :9596777669 ಇ-ಮೇ: dpoanantnag-jk2nic.inಗೆ ಮಾಹಿತಿ ನೀಡಬಹುದು ಎಂದು ಕೋರಲಾಗಿದೆ.
J&K | Anantnag Police announces a reward of Rs 20 lakhs on information leading to the arrest of Pakistan nationals and LeT terrorists Adil Hussain Thoker, Ali Bhai and Hashim Musa, who were involved in the attack on tourists in Baisaran, Pahalgam on 22nd April pic.twitter.com/dfD9nbvBZj
— ANI (@ANI) April 24, 2025