ಮುಂಬೈ : ಕಳೆದ ನವೆಂಬರ್ 27 ರಂದು ಪ್ರಧಾನಿ ಮೋದಿ ಅವರಿಗೆ ಬೆದರಿಕೆ ಸಂದೇಶ ಬಂದಿತ್ತು, ಇದರ ಬೆನ್ನಲ್ಲೇ ಇದೀಗ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಮತ್ತೊಂದು ಸಂದೇಶ ಬಂದಿದೆ. ಬಾಂಬ್ ಸ್ಫೋಟದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆ ನಡೆಸಬಹುದು ಎಂದು ಮುಂಬೈ ಟ್ರಾಫಿಕ್ ಪೊಲೀಸರಿಗೆ ಪಾಕಿಸ್ತಾನದ ಪ್ರಧಾನ ಸಂಸ್ಥೆಯಾದ ಐಎಸ್‌ಐ ಮಾಹಿತಿ ನೀಡಿದ್ದಾರೆ.
ಹೌದು ಈ ಸಂದೇಶದಲ್ಲಿ ಇಬ್ಬರು ವ್ಯಕ್ತಿಗಳನ್ನು ಹೆಸರಿಸಲಾಗಿದ್ದು, ಅವರು ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗಳಾಗಿದ್ದಾರೆ ಎಂದು ಆರೋಪಿಸಲಾಗಿದೆ.ಪ್ರಧಾನಿ ಮೋದಿಗೆ ಜೀವ ಬೆದರಿಕೆ ಇದೆ ಎಂಬ ಮೆಸೇಜ್ ಮುಂಬೈ ಪೊಲೀಸರಿಗೆ ಈ ಮೊದಲು ಕೂಡ ಬಂದಿತ್ತು. ನವೆಂಬರ್ 27ರಂದು ಪೊಲೀಸರಿಗೆ ಅನಾಮಧೇಯ ಕರೆ ಬಂದಿದ್ದು, ಪ್ರಧಾನಿಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಕರೆ ಮಾಡಿದ್ದಾರೆ ಎನ್ನಲಾದ 34 ವರ್ಷದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದ್ದು, ಆಕೆಯ ಹಿನ್ನೆಲೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.








